ಪರಶುರಾಮ ಥೀಮ್ ಪಾರ್ಕ್ ವಿವಾದ: ಮಠಾಧೀಶರ ಬೆಂಬಲ ಪಡೆದು ಹೋರಾಟ ಎಂದ ಮಿಥುನ್‌ ರೈ

Prasthutha|

ಮಂಗಳೂರು: ಕಾರ್ಕಳ ಬೈಲೂರಿನ ಗೋಮಾಳ ಜಾಗದಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಿಸಿ ಕಂಚಿನ ಪ್ರತಿಮೆ ಎಂದು ಜನರನ್ನು ನಂಬಿಸಿ ಫೈಬರ್‌ನಿಂದ ಪರಶುರಾಮನ ಪ್ರತಿಮೆ ಸ್ಥಾಪಿಸಲಾಗಿದೆ. ಇದು ಸನಾತನ ಧರ್ಮ ಮತ್ತು ಪರಶುರಾಮ ದೇವರಿಗೆ ಮಾಡಿದ ವಂಚನೆ ಮತ್ತು ಅನ್ಯಾಯವಾಗಿದೆ. ಮುಂದೆ ಮಠಾಧೀಶರುಗಳ ಬೆಂಬಲ ಪಡೆದು ನ್ಯಾಯಕ್ಕಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದ್ದಾರೆ.

- Advertisement -

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಿಥುನ್, ಕಂಚಿನ ಪ್ರತಿಮೆ ಎಂದು ಹೇಳಿ ಫೈಬರ್‌ ಪ್ರತಿಮೆ ಮಾಡಿ ನಂಬಿಕೆಗೆ ದ್ರೋಹವೆಸಗಲಾಗಿದೆ. ಕಂದಾಯ ಇಲಾಖೆಯ ಆಕ್ಷೇಪದ ನಡುವೆಯೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಗೋಮಾಳ ಜಾಗದಲ್ಲಿ ಅನಧಿಕೃತವಾಗಿ ಪಾರ್ಕ್‌ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಶುಕ್ರವಾರದಿಂದ ಎಲ್ಲ ಮಠಾಧೀಶರ ಬಳಿಗೆ ಹೋಗಿ ಈ ಧರ್ಮವಿರೋಧಿ‌ ಕೃತ್ಯದ ವಿರುದ್ಧ ಹೋರಾಟಕ್ಕೆ ಬೆಂಬಲಿಸಲು ವಿನಂತಿಸುವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರು ತನಿಖೆಗೆ ಸೂಚನೆ ನೀಡಿದ್ದಾರೆ. ಲೋಕಾಯುಕ್ತಕ್ಕೂ ದೂರು ಸಲ್ಲಿಸ ಲಾಗುವುದು ಎಂದು ಮಿಥುನ್ ರೈ ಹೇಳಿದರು.

- Advertisement -

ಸುನಿಲ್‌ ಕುಮಾರ್‌ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿರುವುದಕ್ಕೆ ನಕಲಿ ಪ್ರತಿಮೆಯೇ ಉದಾಹರಣೆ. ಹೀಗಾಗಿ ಸುನಿಲ್‌ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು. ಇದರಲ್ಲಿ ಭಾಗಿಯಾದ ಅಧಿಕಾರಿಗಳನ್ನು ಕೂಡ ಅಮಾನತುಗೊಳಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದರು.



Join Whatsapp