ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಖೈದಿಗಳು ಮೊಬೈಲ್ ಪೋನ್ ಬಳಕೆ ಮಾಡುವ ಮಾಹಿತಿ ದೊರಕಿದ್ದು ಪೊಲೀಸರು ಖೈದಿಗಳಿಂದ ಎಲ್ಲಾ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.
ನಿನ್ನೆ ರಾತ್ರಿ ಸುಮಾರು 9.30 ಕ್ಕೆ 30 ಪೊಲೀಸರ ತಂಡ ಜೈಲಿನ ಟವರ್ 1 ಮತ್ತು 2 ಕ್ಕೆ ಪೊಲೀಸರು ದಾಳಿ ಮಾಡಿದ್ದು, ತಪಾಸಣೆ ವೇಳೆ ಶೌಚಗ್ರಹ ಮತ್ತು ಅದರ ಮುಂಭಾಗದಲ್ಲಿ ಬರೋಬ್ಬರಿ 33 ಮೊಬೈಲ್ ಗಳು ಪತ್ತೆಯಾಗಿದೆ . ಎಲ್ಲಾ ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಈ ಹಿಂದೆ ಶಿವಮೊಗ್ಗ ಹರ್ಷನ ಹತ್ಯೆ ಆರೋಪಿಗಳು ವೀಡಿಯೋ ಕರೆ ಮುಖಾಂತರ ಕುಟುಂಬದವರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂಬ ಸುದ್ದಿ ರಾಜ್ಯಾದ್ಯಂತ ಚರ್ಚೆಯಾಗಿತ್ತು. ಬಳಿಕ ಪರಪ್ಪನ ಅಗ್ರಹಾರಕ್ಕೆ ಭೇಟಿಕೊಟ್ಟ ಗೃಹಮಂತ್ರಿ ಆರಗ ಜ್ಞಾನೇಂದ್ರ ಖೈದಿಗಳ ಮೊಬೈಲ್ ಬಳಕೆ ಬಗ್ಗೆ ಕರ್ಕಶವಾಗಿ ಪ್ರತಿಕ್ರಿಯಿಸಿದ್ದು, ಮಾಹಿತಿ ನೀಡುವವರಿಗೆ ಶಿಕ್ಷೆಯಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಕೂಡಾ ಘೋಷಿಸಿದ್ದರು.