ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌| 25ನೇ ಬಾರಿ ಪ್ರಶಸ್ತಿ ಗೆದ್ದ ಪಂಕಜ್‌ ಅಡ್ವಾಣಿ

Prasthutha|

​​​​​​​ಕೌಲಾಲಂಪುರದಲ್ಲಿ ನಡೆದ  ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಹೆಮ್ಮೆಯ ಪಂಕಜ್‌ ಅಡ್ವಾಣಿ, ಸತತ 5ನೇ ಬಾರಿಗೆ ಮತ್ತು ಒಟ್ಟಾರೆಯಾಗಿ 25ನೇ ಬಾರಿಗೆ ವಿಶ್ವ ಚಾಂಪಿಯನ್‌ ಆಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

- Advertisement -

ಭಾರತದವರೇ ಆದ ಸೌರವ್‌ ಕೊಠಾರಿ ಅವರನ್ನು ಶನಿವಾರ ನಡೆದ ಫೈನಲ್‌ನಲ್ಲಿ ಪಂಕಜ್‌, 4–0 ಫ್ರೇಮ್‌ಗಳಿಂದ ಮಣಿಸಿದರು. ‘ಬೆಸ್ಟ್‌ ಆಫ್‌ 7’ ಫ್ರೇಮ್‌ಗಳ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಅಡ್ವಾಣಿ, ‘150 ಅಪ್‌’ (ಮೊದಲು 150 ಪಾಯಿಂಟ್ಸ್ ಗಳಿಸುವ ಆಟಗಾರ ಫ್ರೇಮ್‌ ಗೆಲ್ಲುವ ಮಾದರಿ) ಯಲ್ಲಿ ನಡೆದ ಫೈನಲ್‌ನಲ್ಲಿ ಅವರು 151–0, 150–31, 153–12, 150–29 ಅಂತರದಲ್ಲಿ ಜಯಿಸಿದರು. ಅಡ್ವಾಣಿ ಅವರು ನಾಲ್ಕು ಫ್ರೇಮ್‌ಗಳಿಂದ 600ಕ್ಕೂ ಅಧಿಕ ಪಾಯಿಂಟ್ಸ್‌ ಕಲೆಹಾಕಿದರೆ, ಕೊಠಾರಿ ಕೇವಲ 72 ಪಾಯಿಂಟ್ಸ್‌ ಮಾತ್ರ ಗಳಿಸಿದರು. ಮೂರನೇ ಫ್ರೇಮ್‌ನ 153 ಪಾಯಿಂಟ್ಸ್‌ಗಳನ್ನೂ ಒಂದೇ ಬ್ರೇಕ್‌ನಲ್ಲಿ ಗಳಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. 12 ತಿಂಗಳ ಹಿಂದೆ ಕತಾರ್‌ನಲ್ಲಿ ನಡೆದಿದ್ದ ಐಬಿಎಸ್‌ಎಫ್‌ 6–ರೆಡ್‌ ಸ್ನೂಕರ್‌ ವಿಶ್ವಕಪ್‌ನಲ್ಲಿ ಅಡ್ವಾಣಿ ಅವರ ಕೊನೆಯದಾಗಿ ವಿಶ್ವ ಕಿರೀಟ ಗೆದ್ದಿದ್ದರು.

ʻವಿಶ್ವ  ಬಿಲಿಯರ್ಡ್ಸ್‌ ಚಾಂಪಿಯನ್‌. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ 5ನೇ ಮತ್ತು ಒಟ್ಟಾರೆಯಾಗಿ 25ನೇ ಚಿನ್ನದ ಪದಕವನ್ನು ಗೆದ್ದಿರುವ ಕುರಿತು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ. ಹೆಮ್ಮೆಯ ಭಾರತೀಯ, ಜೈ ಹಿಂದ್‌ʼ ಎಂದು ಪಂಕಜ್‌ ಟ್ವೀಟ್‌ ಮಾಡಿದ್ದಾರೆ.

- Advertisement -

“ಸತತ ಐದು ಬಾರಿ ವಿಶ್ವ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಕನಸಾಗಿತ್ತು. ಈ ವರ್ಷ ನಾನು ಭಾಗವಹಿಸಿದ ಪ್ರತಿ ಬಿಲಿಯರ್ಡ್ಸ್ ಟೂರ್ನಿಯಲ್ಲೂ ಆಡಿರುವ ಮತ್ತು ಗೆದ್ದಿರುವ ರೀತಿಯ ಬಗ್ಗೆ ನಿಜವಾಗಿಯೂ ಸಂತೋಷವಾಗಿದೆ. ವಿಶ್ವ ಮಟ್ಟದಲ್ಲಿ ನನ್ನ ದೇಶಕ್ಕೆ ಮತ್ತೊಂದು ಚಿನ್ನದ ಪದಕವನ್ನು ತಂದುಕೊಟ್ಟಿರವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಅಡ್ವಾಣಿ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಮೊದಲ ಫ್ರೇಮ್‌ನಲ್ಲಿ ಒಂದೇ ಬ್ರೇಕ್‌ನಲ್ಲಿ ಅವರು 149 ಪಾಯಿಂಟ್ಸ್‌ ಗಳಿಸಿದರೆ,



Join Whatsapp