ಲೇಡಿಗೆ ಪ್ಯಾನಿಕ್ ಎಟ್ಯಾಕ್: ನೆಲದಲ್ಲಿ ಬಿದ್ದು ನರಳಾಡುತ್ತಿದ್ದರೂ ಕಣ್ಣೆತ್ತಿಯೂ ನೋಡದ ವಿಮಾನ ನಿಲ್ದಾಣ ಸಿಬ್ಬಂದಿ

Prasthutha|

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಟರ್ಮಿನಲ್ 3ರಲ್ಲಿ ಮಹಿಳೆಯೊಬ್ಬರು ಪ್ಯಾನಿಕ್ ಅಟ್ಯಾಕ್ ಒಳಗಾಗಿದ್ದು, ಮಹಿಳೆ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಮಹಿಳೆಯ ನೋವಿಗೆ ಅಲ್ಪವೂ ಸ್ಪಂದಿಸದೆ ತಮ್ಮ ಪಾಡಿಗೆ ಇದ್ದ ಆಘಾತಕಾರಿ ಘಟನೆ ವೈರಲ್ ಆಗಿದೆ.

- Advertisement -

ವಿಪುಲ್ ಭೀಮಾನಿ ಎಂಬವರು ಇನ್ಸ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಅವರು ತಮ್ಮ ಚಿಕ್ಕಮ್ಮ ಮತ್ತು ಸೋದರಸಂಬಂಧಿಯೊಂದಿಗೆ ಏರ್ ಇಂಡಿಯಾ ವಿಮಾನವನ್ನು ಹಿಡಿಯಲು ತೆರಳಿದ್ದು ಕೆಲವು ತಾಂತ್ರಿಕ ತೊಂದರೆಯಿಂದಾಗಿ ಭದ್ರತಾ ಚೆಕ್-ಇನ್ ಪಾಯಿಂಟ್ ನಲ್ಲಿ ವಿಳಂಬವಾದರು ಎನ್ನಲಾಗಿದೆ. 

ತಾಂತ್ರಿಕ ಸಮಸ್ಯೆಯಿಂದಾಗಿ ಚೆಕ್-ಇನ್ ನಲ್ಲಿ ಸಹಾಯ ಮಾಡಲು ಅವರು ಏರ್ ಇಂಡಿಯಾ ಸಿಬ್ಬಂದಿಯನ್ನು ವಿನಂತಿಸಿದರೂ ಸಿಬ್ಬಂದಿ ಅವರ ಮನವಿಯನ್ನು ತಳ್ಳಿ ಹಾಕಿದ್ದು ಭದ್ರತಾ ಚೆಕ್-ಇನ್ ಸಮಸ್ಯೆ ನಮ್ಮ ವ್ಯವಹಾರವಲ್ಲ ಎಂದು ಹೇಳಿದ್ದಾರೆ.

- Advertisement -

ಆ ಬಳಿಕ ಮೂವರೂ ಅವರು ಗೇಟ್ (32 ಬಿ) ಕಡೆಗೆ ಓಡಿದ್ದು ಆದರೆ 5 ನಿಮಿಷಗಳಷ್ಟು ತಡವಾಗಲಿದೆ ಎಂದು ವಿಮಾನಯಾನ ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ತಮ್ಮ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಚಿಕ್ಕಮ್ಮ ಓಡಲು ಸಾಧ್ಯವಿಲ್ಲದೆ ಪ್ಯಾನಿಕ್ ಎಟ್ಯಾಕ್ ಬಂದು ನೆಲದಲ್ಲಿ ಹೊರಳಾಡುತ್ತಿದ್ದರೂ ವಿಮಾನ ನಿಲ್ದಾಣದ ಸಿಬ್ಬಂದಿ  ಸ್ವಲ್ಪವೂ ಕರುಣೆ ತೋರದೆ ಸ್ಪಂದಿಸದೆ ಅಮಾನವೀಯತೆ ಮೆರೆದಿದ್ದಾರೆ ಎಂದಿದ್ದಾರೆ.

Join Whatsapp