ಪಂಚಾಯತ್‌ ರಾಜ್‌ ಕಾಯ್ದೆತಿದ್ದುಪಡಿ; ಸರಕಾರಿ ನೌಕರಿಯಿಂದ ವಜಾಗೊಂಡವರಿಗೆ ಪಂಚಾ ಯತ್‌ ಚುನಾವಣೆಗಳಲ್ಲಿ ಸ್ಪರ್ಧೆ ನಿಷೇಧ

Prasthutha|

ಬೆಂಗಳೂರು: ತಾಲೂಕು ಪಂಚಾಯತ್‌ಗಳಿಗೆ ಜನಸಂಖ್ಯೆ ಆಧಾರದಲ್ಲಿ ಸದಸ್ಯರ ಆಯ್ಕೆ ಮಾಡಲು ಪೂರಕವಾಗಿ ಸರಕಾರ ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

- Advertisement -

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ಮಸೂದೆ 2022 ಅನ್ನು ಸೋಮವಾರ ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಮಂಡಿಸಲಿದ್ದು,ಸರಕಾರಿ ನೌಕರಿಯಿಂದ ವಜಾಗೊಂಡಿರುವವರಿಗೆ ಪಂಚಾ ಯತ್‌ ಚುನಾವಣೆಗಳಿಗೆ ಸ್ಪರ್ಧಿಸಲು ನಿಷೇಧ ಹೇರುವ ಪ್ರಸ್ತಾವವೂ ಮಸೂದೆಯಲ್ಲಿದೆ.

ತಿದ್ದುಪಡಿ ಪ್ರಕಾರ, ತಾಲೂಕಿನ ಜನ ಸಂಖ್ಯೆ 2 ಲಕ್ಷಕ್ಕಿಂತ ಹೆಚ್ಚಿದ್ದರೆ, ಕನಿಷ್ಠ 12 ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡಲು ಅವಕಾಶವಿದೆ. ಜನಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚು ಹಾಗೂ 2 ಲಕ್ಷಕ್ಕಿಂತ ಕಡಿಮೆ ಇದ್ದರೆ, ಅಂತಹ ತಾಲೂಕು ಪಂಚಾಯತ್‌ಗಳಿಗೆ ಕನಿಷ್ಠ 10 ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗುತ್ತದೆ. ಈ ತಾಲೂಕು ಪಂಚಾಯತ್‌ಗಳಲ್ಲಿ ಕನಿಷ್ಠ 11 ಸದಸ್ಯರಿರುವಂತೆ ನೋಡಿಕೊಳ್ಳಲು ತಿದ್ದುಪಡಿ ಮಾಡಲಾಗುತ್ತಿದೆ.



Join Whatsapp