ಪಾಣಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಂಙಳ್ ಅಸ್ತಂಗತ: ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಸಂತಾಪ

Prasthutha|

ಬೆಂಗಳೂರು: ಇಸ್ಲಾಮಿಕ್ ಉಲಮಾ ಶಿರೋಮಣಿಗಳಲ್ಲಿ ಒಬ್ಬರೂ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರೂ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷರೂ ಆಗಿರುವ ಸಯ್ಯದ್ ಪಾಣಕ್ಕಾಡ್ ಶಿಹಾಬ್ ತಂಙಳ್ ರ ನಿಧನವಾರ್ತೆ ದುಃಖಕರವಾಗಿದೆ .

- Advertisement -

ಹಲವಾರು ಮೊಹಲ್ಲಾಗಳ ಖಾಝಿ ಸ್ಥಾನವನ್ನು ಅಲಂಕರಿಸಿದ ತಂಙಳ್, ರಾಜಕೀಯ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು. ತಂಙಳರ ಜೀವನ ನಮಗೆಲ್ಲರಿಗೂ ಮಾದರಿಯಾಗಲಿ. ತಂಙಳರ ಪರಲೋಕ ಜೀವನ ಸುಖಕರವಾಗಿರಲಿ ಎಂದು ಸೃಷ್ಟಿಕರ್ತನಲ್ಲಿ ಪ್ರಾರ್ಥಿಸುತ್ತಿದ್ದೇನೆ  ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಸಂತಾಪ ವ್ಯಕ್ತಪಡಿಸಿದರು.

Join Whatsapp