ಪಮೇಲಾ ಗೋಸ್ವಾಮಿ ಡ್ರಗ್ಸ್ ಕೇಸ್ | ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ ಉಪಾಧ್ಯಕ್ಷನಿಗೆ ಸಮನ್ಸ್

Prasthutha|

ಮಂಗಳೂರು : ಕೊಕೇನ್ ನೊಂದಿಗೆ ಬಂಧನಕ್ಕೊಳಪಟ್ಟಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಝ್ರಾ ಮತ್ತು ಯುವ ಮೋರ್ಚಾ ಉಪಾಧ್ಯಕ್ಷ ಸಂಕುದೇಬ್ ಪಾಂಡಾಗೆ ನೋಟಿಸ್ ಜಾರಿಯಾಗಿದೆ.

- Advertisement -

ಡ್ರಗ್ಸ್ ಕೇಸ್ ನಲ್ಲಿ ಅನುಪಮ್ ಗೆ ನೋಟಿಸ್ ಜಾರಿಗೊಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ, ತಮಗೆ ನೋಟಿಸ್ ದೊರಕಿಲ್ಲ ಎಂದು ಅವರು ಹೇಳಿದ್ದಾರೆ.

ಕೊಕೇನ್ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ ಫೆ.19ರಂದು ಪೊಲೀಸರಿಂದ ಬಂಧಿಸಲ್ಪಟ್ಟಿದ್ದರು. ಬಿಜೆಪಿ ನಾಯಕ ರಾಕೇಶ್ ಸಿಂಗ್ ತನ್ನ ಬಂಧನಕ್ಕೆ ಸಂಚು ರೂಪಿಸಿದ್ದಾರೆ ಎಂದು ಪಮೇಲಾ ಗೋಸ್ವಾಮಿ ಕೋರ್ಟ್ ಹಾಜರಾಗುವ ವೇಳೆ ಮಾಧ್ಯಮಗಳ ಮುಂದೆ ಹೇಳಿದ್ದರು. ರಾಕೇಶ್ ಸಿಂಗ್ ಈಗಾಗಲೇ ಬಂಧಿಸಲ್ಪಟ್ಟಿದ್ದಾರೆ.     

Join Whatsapp