ಲಂಡನ್: ಫೆಲೆಸ್ತೀನ್ ಮಕ್ಕಳ ಕಲಾಕೃತಿಗಳನ್ನು ಲಂಡನ್ ಆಸ್ಪತ್ರೆ ಕಲಾ ಶಾಲೆಯಿಂದ ತೆಗೆದಿದ್ದಾರೆ ಎಂದು ಅಲ್ಲಿನ ಮುಖ್ಯ ಟೀಚರ್ ತಿಳಿಸಿದ್ದಾರೆ.
ಫೆಲೆಸ್ತೀನ್ ಮಕ್ಕಳ ಕಲಾಕೃತಿಗಳನ್ನು ತೆಗೆಯಲು ಇಸ್ರೇಲಿ ಪರ ವಿದ್ಯಾರ್ಥಿಗಳ ಒತ್ತಾಯವೇ ಕಾರಣ ಎಂದು ತಿಳಿದುಬಂದಿದೆ.
ಗಡಿಯೆಡೆಗಳಿಲ್ಲದ ಕಲಾ ಹಬ್ಬ ಎಂಬ ಹೆಸರಿನ ವು ಚೆಲ್ಸಿಯಾ ಮತ್ತು ವೆಸ್ಟ್ ಮಿನಿಸ್ಟರ್ ಆಸ್ಪತ್ರೆ ಫೌಂಡೇಶನ್ ನಲ್ಲಿ ಇದ್ದ ಕಲಾಕೃತಿಗಳನ್ನು ಯುಕೆಎಲ್’ಎಫ್’ಐ- ಇಸ್ರೇಲಿಗರಿಗಾಗಿ ಯುಕೆ ವಕೀಲರು ಎಂಬ ಸಂಘಟನೆಯ ಕಾನೂನು ಕ್ರಮದ ಬೆದರಿಕೆ ಕಾರಣಕ್ಕೆ ತೆಗೆದಿದ್ದಾರೆ ಎನ್ನಲಾಗಿದೆ.
ಚೆಲ್ಸಿಯಾ ಮತ್ತು ವೆಸ್ಟ್ ಮಿನಿಸ್ಟರ್ ಆಸ್ಪತ್ರೆಯ ಮಕ್ಕಳಹೊರ ರೋಗಿ ವಿಭಾಗದ ಬದಿಯ ಕಾರಿಡಾರ್’ನಲ್ಲಿ 2012ರಿಂದ ಹಾಕಲಾಗಿದ್ದ 21 ಸೆರಾಮಿಕ್ ಪ್ಲೇಟ್’ಗಳನ್ನು ತೆಗೆಯಲಾಗಿದೆ.
ಸಿಸಿಎಚ್’ಎಸ್- ಚೆಲ್ಸಿಯಾ ಕಮ್ಯೂನಿಟಿ ಆಸ್ಪತ್ರೆ ಶಾಲೆಯು ಚಿಕಿತ್ಸೆಗೆ ಬರುವ ಮಕ್ಕಳ ವಿಶೇಷ ಕಲಿಕೆಗೆ ಅವಕಾಶ ನೀಡುತ್ತದೆ. “ಇದೊಂದು ಅದ್ಭುತ ಪ್ರದರ್ಶನ. ಈಗ ಅದು ಕೆಟ್ಟ ರಾಜಕೀಯಕ್ಕೆ ಬಲಿಯಾಗಿದೆ, ಕಲೆಯಲ್ಲಿ ರಾಜಕೀಯ ಏನೂ ಇರಲಿಲ್ಲ” ಎಂದು ಅಲ್ಲಿನ ಪ್ರಿನ್ಸಿಪಾಲ್ ಜೆನೆಟ್ ಸ್ಟೀಲ್ ಹೇಳಿದರು.
ಈ ಕಲಾ ತಟ್ಟೆಗಳು 2012ಕ್ಕೆ ಮೊದಲು ಲಂಡನ್ನಿಗೆ ಬರುವುದಕ್ಕೆ ಮೊದಲು ಸ್ವೀಡನ್’ನಲ್ಲಿ ಪ್ರದರ್ಶನ ಕಂಡಿದ್ದವು. ಅದು ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿತ್ತು ಎಂದೂ ಜೆನೆಟ್ ಹೇಳಿದರು.
“ಅವು ಗಾಜಾ ಮತ್ತು ಲಂಡನ್ನಿನ ಮಕ್ಕಳ ಜಂಟಿ ಕೆಲಸ. ಎಷ್ಟೊಂದು ಅದ್ಭುತ ಕಲಾಕೃತಿಯಾಗಿತ್ತು. ಕೆಲವರ ಸಿಟ್ಟಿಗೆ ಅವು ಬಲಿಯಾಗುವುದೇ? ಹೀಗಾದರೆ ನಾವು ಮಕ್ಕಳು ಒಂದಾಗಿ ಕೆಲಸ ಮಾಡುವಂತೆ ಮಾಡುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು.
“ಇಲ್ಲಿಯವರೆಗೆ ಯಾರೂ ಈ ಬಗ್ಗೆ ದೂರಿಲ್ಲ. ಈ ಅದ್ಭುತ ಕೆಲಸದ ವಿರುದ್ಧ ಈಗೇನು ಬಂತು ಈ ಯುಕೆಎಲ್’ಎಫ್’ಐ ನವರಿಗೆ?” ಅವರು ಪ್ರಶ್ನಿಸಿದರು.
“ಈ ಚಿತ್ರಗಳ ಪ್ರದರ್ಶನದಿಂದ ನಮ್ಮ ಭಾವನಗಳಿಗೆ ಧಕ್ಕೆಯಾಗಿದೆ, ಮನಸ್ಸಿಗೆ ನೋವಾಗಿದೆ ಎಂದು ಇಸ್ರೇಲಿ ಮಕ್ಕಳು ದೂರಿದ್ದರಿಂದ ನಾವು ಈ ಕಲಾ ಫಲಕಗಳನ್ನು ತೆಗೆಸಲು ಕೆಲಸ ಮಾಡಬೇಕಾಯಿತು” ಎಂದು ಯುಕೆಎಲ್’ಎಫ್’ಐ ನಿರ್ದೇಶಕಿ ಕರೋಲಿನ್ ಟರ್ನರ್ ಹೇಳಿದರು.
“ಆ ಆಲಯ ಕಲ್ಲು ಶಿಖರವು ಜೂದಾಯಿಸಂನಲ್ಲಿ ಅತಿ ಪವಿತ್ರವಾದ ಸ್ಥಳವಾಗಿದೆ. ಅವರ ಪವಿತ್ರ ಸ್ಥಳದ ಮೇಲೆ ಫೆಲೆಸ್ತೀನ್ ಧ್ವಜವನ್ನು ಹೇಗೆ ತಾನೆ ಸಹಿಸಿಕೊಂಡಾರು?” ಎಂದೂ ಯುಕೆಎಲ್’ಎಫ್’ಐನವರು ಪ್ರಶ್ನಿಸಿದ್ದಾರೆ.