ಹೊಸದಿಲ್ಲಿ: ಪಾಕಿಸ್ತಾನದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಪಡೆಯಲಾದ ಪದವಿಗಳಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಹೇಳಿದ ಬೆನ್ನಲ್ಲೇ ಪಾಕಿ ಸ್ಥಾನದ ತಾಂತ್ರಿಕ ಕಾಲೇಜುಗಳಲ್ಲಿ ಶಿಕ್ಷಣ ಪಡೆದವರಿಗೆ ಮಾನ್ಯತೆ ನೀಡಲಾಗದು ಎಂದು ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಹೇಳಿದೆ.
ಭಾರತದಲ್ಲಿರುವ ವಿದ್ಯಾರ್ಥಿಗಳಷ್ಟೇ ಅಲ್ಲದೆ, ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತ ಮೂಲದ ವಿದ್ಯಾರ್ಥಿಗಳಿಗೂ ಈ ಸೂಚನೆ ಅನ್ವಯಿಸು ತ್ತದೆ. ಪಾಕಿಸ್ತಾನದಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮುಗಿಸಿ ಬಂದರೆ ಅದರ ಆಧಾರದಲ್ಲಿ ಭಾರತದಲ್ಲಿ ಓದನ್ನು ಮುಂದುವರಿಸಲು ಅಥವಾ ಭಾರತದಲ್ಲಿ ಉದ್ಯೋಗ ಮಾಡಲು ಅವಕಾಶ ನೀಡ ಲಾಗುವುದಿಲ್ಲ. ಹಾಗಾಗಿ ಉನ್ನತ ಶಿಕ್ಷಣದ ಆಸೆಯಿಂದ ಯಾವುದೇ ಭಾರತೀಯ ವಿದ್ಯಾರ್ಥಿಗಳು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಬಾರದು ಎಂದು ಸೂಚಿಸಿದೆ.
ಇದೇ ವೇಳೆ ಒಂದು ಸ್ಪಷ್ಟನೆಯನ್ನೂ ನೀಡಿ ರುವ ಮಂಡಳಿ, “ಪಾಕಿಸ್ಥಾನದಿಂದ ಈ ಹಿಂದೆಯೇ ತಾಂತ್ರಿಕ ಶಿಕ್ಷಣ ಪಡೆದು ಭಾರತಕ್ಕೆ ವಲಸೆ ಬಂದು ಇಲ್ಲಿ ಪೌರತ್ವ ಪಡೆದಿರುವ ವಿದ್ಯಾರ್ಥಿಗಳಿಗೆ ಈ ಸೂಚನೆ ಅನ್ವಯಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.