ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಿಗ್ ಶಾಕ್!

Prasthutha|

►5 ವರ್ಷ ಸಾರ್ವಜನಿಕ ಹುದ್ದೆಯಲ್ಲಿರದಂತೆ ನಿಷೇಧ

- Advertisement -

ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನ ಚುನಾವಣಾ ಆಯೋಗ ಶುಕ್ರವಾರ ಭಾರಿ ಕ್ರಮ ಕೈಗೊಂಡಿದೆ. ವಿದೇಶಿ ನಾಯಕರಿಂದ ಸ್ವೀಕರಿಸಿದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನದ 63(1)(3) ವಿಧಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಇಮ್ರಾನ್ ಅವರಿಗೆ ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಲ್ಲಿರದಂತೆ ನಿಷೇಧ ಹೇರಲಾಗಿದೆ.

70 ವರ್ಷದ ಇಮ್ರಾನ್ ಖಾನ್ ಅವರು ತೋಶಾಖಾನಾ ಎಂದು ಕರೆಯಲ್ಪಡುವ ರಾಜ್ಯ ಭಂಡಾರದಿಂದ ರಿಯಾಯಿತಿ ದರದಲ್ಲಿ ಖರೀದಿಸಿದ ಉಡುಗೊರೆಗಳ ಮಾರಾಟದಿಂದ ಬಂದ ಆದಾಯವನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಸಂವಿಧಾನದ 62 (1)(ಎಫ್) ವಿಧಿ ಅಡಿಯಲ್ಲಿ ಬದುಕಿರುವವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಆಡಳಿತರೂಢ ಪಾಕಿಸ್ತಾನ ಡೆಮಾಕ್ರಟಿಕ್ ಮೂವ್ಮೆಂಟ್ (ಪಿಡಿಎಂ)   ಆಗಸ್ಟ್ ನಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.



Join Whatsapp