ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್ ಖಾನ್‌‌ ಮುಂದಿನ ಚುನಾವಣಾ ಸ್ಪರ್ಧೆಗೆ ತೊಡಕಾಗೊ ಸಾಧ್ಯತೆ!

Prasthutha|

ದೇಶದ ರಸಹ್ಯ ಸೋರಿಕೆಯ ಗಂಭೀರ ಪ್ರಕಾರಣ ದಾಖಲು!

- Advertisement -

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್ ಖಾನ್‌‌ಗೆ ಮುಂದಿನ ಚುನಾವಣಾ ಸ್ಪರ್ಧೆಗೆ ತೊಡಕಾಗೊ ಸಾಧ್ಯತೆ ದಟ್ಟವಾಗಿದೆ. ಸರಕಾರದ ರಹಸ್ಯಗಳನ್ನು ಸೋರಿಕೆ ಮಾಡಿದ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯ ಅವರ ವಿರುದ್ಧ ದೋಷಾರೋಪಣೆ ಮಾಡಿದೆ. ಇದು ಮುಂದಿನ ವರ್ಷದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ಇಮ್ರಾನ್‌ರನ್ನು ವಂಚಿತರಾಗಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.

2022ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭ ಇಮ್ರಾನ್‍ಖಾನ್ ರಷ್ಯಾಗೆ ಭೇಟಿ ನೀಡಿದ್ದ ಸಮಯದಲ್ಲಿ, ತನ್ನ ಸರಕಾರವನ್ನು ಪದಚ್ಯುತಗೊಳಿಸಲು ಪಾಕ್ ಮಿಲಿಟರಿಯೊಂದಿಗೆ ಅಮೆರಿಕ ಪಿತೂರಿ ನಡೆಸಿದ್ದು, ಈ ಬಗ್ಗೆ ವಾಷಿಂಗ್ಟನ್‍ನಲ್ಲಿರುವ ಪಾಕ್ ರಾಯಭಾರಿ ತನಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದರು.

- Advertisement -

ಪತ್ರದ ವಿವರ ಮಾಧ್ಯಮಗಳಲ್ಲಿ ಸೋರಿಕೆಯಾಗಿತ್ತು. ಆದರೆ ಪತ್ರ ಸೋರಿಕೆ ತನ್ನಿಂದಾಗಲಿಲ್ಲ, ಬೇರೆ ಮೂಲಗಳಿಂದ ಪತ್ರದ ವಿವರ ಸೋರಿಕೆಯಾಗಿರಬಹುದು ಎಂದಿದ್ದರು.

ಇದೀಗ ಆ ಪ್ರಕರಣ ಎದುರಿಸುತ್ತಿದ್ದಾರೆ. ಆ ಆರೋಪ ಸಾಬೀತಾದರೆ 14 ವರ್ಷ ಜೈಲು ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಗೂ ಗುರಿಯಾಗಬಹುದಾದ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಇಮ್ರಾನ್ ಖಾನ್ ಭ್ರಷ್ಟಾಚಾರ ಎಸಗಿದ್ದು ಸಾಬೀತಾಗಿ 3 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ. ಆದರೆ ಶಿಕ್ಷೆ ಅಮಾನತುಗೊಂಡಿರುವುದರಿಂದ ಇಮ್ರಾನ್ ಜಾಮೀನಿನಲ್ಲಿ ಬಿಡುಗಡೆಗೊಂಡು ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ಪ್ರಯತ್ನ ಮುಂದುವರೆಸುತ್ತಿದ್ದಾರೆ.

ಆದರೆ ರಹಸ್ಯ ಸೋರಿಕೆ ಪ್ರಕರಣ ಗಂಭೀರವಾಗಿದ್ದು, ಇಮ್ರಾನ್‍ ಖಾನ್ ಭಾರೀ ಬೆಲೆ ತೆರಬೇಕಾಗಿ ಬರಬಹುದಾದ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.



Join Whatsapp