ಯುವಕನ ಪ್ರೀತಿಗೆ ಮರುಳಾಗಿ ಭಾರತಕ್ಕೆ ಬಂದಿದ್ದ ಪಾಕ್ ಯುವತಿ ತಾಯ್ನಾಡಿಗೆ ವಾಪಸ್

Prasthutha|

ಬೆಂಗಳೂರು: ಯುವಕನ ಪ್ರೀತಿಗೆ ಮರುಳಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಪಾಕ್  ಯುವತಿಯನ್ನು ಪೊಲೀಸರು ಮತ್ತೆ ಅಟ್ಟಾರಿ ಬಾರ್ಡರ್‌ ಮೂಲಕ ವಾಪಸ್ ಕಳುಹಿಸಿದ್ದಾರೆ.

- Advertisement -

ಪಾಕ್ ಯುವತಿ ಇಕ್ರಾ ಜೀವನಿ ಎಂಬ ಯುವತಿ ಆನ್‌’ಲೈನ್‌’ನಲ್ಲಿ ಲುಡೋ ಗೇಮ್ ಆಡುವ ಚಟ ಬೆಳೆಸಿಕೊಂಡಿದ್ದು, ಈ ಆಟ ಆಡುತ್ತಲೇ ಆಕೆಗೆ ಭಾರತದ ಉತ್ತರ ಪ್ರದೇಶ ಮೂಲದ 26 ವರ್ಷದ ಮುಲಾಯಂ ಸಿಂಗ್ ಎಂಬಾತನ ಪರಿಚಯವಾಗಿದೆ.

ಪರಿಚಯ ಪ್ರೇಮಕ್ಕೆ ತಿರುಗಿದ ಬಳಿಕ ಮುಲಾಯಂಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬರುವುದಕ್ಕೆ ಮುಂದಾಗಿದ್ದಳು. ಆದರೆ ಆಕೆಯ ಬಳಿ ವೀಸಾ ಇರಲಿಲ್ಲ.

- Advertisement -

  ಗೆಳೆಯ ಮುಲಾಯಂ ಆಕೆಗೆ ನೇಪಾಳಕ್ಕೆ ಹೋಗಿ ಅಲ್ಲಿಂದ ಸನೋಲಿ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸುವಂತೆ ಸಲಹೆ ನೀಡಿದ್ದಾನೆ. ಪ್ರಿಯಕರನ ಮಾತು ಕೇಳಿದ ಆಕೆ ಅದರಂತೆ ಪಾಕಿಸ್ಥಾನದಿಂದ ನೇಪಾಳಕ್ಕೆ ತೆರಳಿದ್ದಾಳೆ. ಕಳೆದ ಸೆಪ್ಟೆಂಬರ್ 19 ರಂದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಲ್ಯಾಂಡ್ ಆದ ಇಕ್ರಾ ಜೀವನಿಯನ್ನು ಅಲ್ಲಿ ಮುಲಾಯಂ ಸ್ವಾಗತಿಸಿದ್ದಾನೆ.

ಅಲ್ಲಿ ಇಬ್ಬರು ಮದುವೆಯಾಗಿದ್ದು, ಒಂದು ವಾರಗಳ ಕಾಲ ಇಬ್ಬರೂ ಅಲ್ಲೇ  ಕಳೆದಿದ್ದಾರೆ. ನಂತರ ಇಬ್ಬರು ಇಂಡೋ ನೇಪಾಳ್ ಸನೋಲಿ ಬಾರ್ಡರ್‌  ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ. ನಂತರ ಬೆಂಗಳೂರಿಗೆ ಬಂದ ಈ ಜೋಡಿ ಬೆಂಗಳೂರಿನಲ್ಲಿ ವಾಸ ಮಾಡಲು ಶುರು ಮಾಡಿದ್ದಾರೆ. ಇಕ್ರಾ ರವಾ ಎಂಬ ಹಿಂದೂ ಹೆಸರನ್ನು ಇರಿಸಿಕೊಂಡಿದ್ದು ಇಬ್ಬರು ಜೊತೆಯಾಗಿ ವಾಸ ಮಾಡಲು ಶುರು ಮಾಡಿದ್ದಾರೆ.

ಇವರು ನೇಪಾಳದಿಂದ ಸೀದಾ ಬೆಂಗಳೂರಿಗೆ ಬಂದು ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ವಾಸವಾಗಿದ್ದರು. ಈ ಮಧ್ಯೆ ತಾಯಿಯನ್ನ ಸಂಪರ್ಕ ಮಾಡಲು ಇಕ್ರಾ ಜೀವನಿ ಯತ್ನಿಸಿದ್ದು, ಈ ಸಂಗತಿಯನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತಚರ ಇಲಾಖೆ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ ಹಾಗೂ ಮುಲಾಯಂ ಸಿಂಗ್‌ನನ್ನು ಜ. 23 ರಂದು ಪೊಲೀಸರು ಬಂಧಿಸಿದ್ದರು. ನಂತರ ಯುವತಿಯನ್ನು ವಿಚಾರಣೆ ನಡೆಸಿದಾಗ ರಾವಾ ಯಾದವ್ ಎಂಬ ಹೆಸರು ಬದಲಾಯಿಸಿಕೊಂಡು ಪಾಸ್‌ ಪೋರ್ಟ್‌’ಗೆ ಅರ್ಜಿ ಹಾಕಿದ್ದ ಸಂಗತಿ ತಿಳಿದಿತ್ತು. ಇನ್ನು ಬಂಧಿತ ಯುವತಿಯ ಬಗ್ಗೆ ಎಫ್‌’ಆರ್‌ಆರ್‌’ಓ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದರು.

Join Whatsapp