BJP ಐಟಿ ಸೆಲ್ ನಲ್ಲಿ ‘ಪಾಕಿಸ್ತಾನಿ’ ಯುವತಿಯ ಫೋಟೊ!

Prasthutha|

‘ಇನ್ನೋಸೆಂಟ್‌ & ಕ್ಯೂಟ್‌ ಪಾಕಿಸ್ತಾನಿ ಗರ್ಲ್ಸ್’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಅಪ್ಲೋಡ್‌ ಮಾಡಲಾಗಿದ್ದ ಯುವತಿಯ ಫೋಟೋವನ್ನು ಬಿಜೆಪಿ ಐಟಿ ಸೆಲ್‌ನ ಖಾತೆಯಾದ ‘ವಿನಿತಾ ಹಿಂದೂಸ್ತಾನಿ’ ಎಂಬ ಖಾತೆಯು ತನ್ನ ಪ್ರೊಫೈಲ್ ನಲ್ಲಿ ಬಳಸಿರುವುದು ಪತ್ತೆಯಾಗಿದೆ.

- Advertisement -

ಟ್ವಿಟರ್‌ನಲ್ಲಿ ಸುಮಾರು 21 ಸಾವಿರಕ್ಕೂ ಅಧಿಕ ಫಾಲೋವರ್‌‌ಗಳನ್ನು ಹೊಂದಿದ್ದ ‘ವಿನಿತಾ ಹಿಂದೂಸ್ತಾನಿ’ ಖಾತೆಯ ಬಯೋದಲ್ಲಿ, ಬಿಹಾರಿ ಮತ್ತು ಭಾರತೀಯ ಆಗಿದ್ದಕ್ಕೆ ಹೆಮ್ಮೆ, ಟೀಚರ್‌, ಕೇಸರಿ ಪ್ರೀತಿ, ಬಿಜೆಪಿ ಮತ್ತು ಆರೆಸ್ಸೆಸ್ ಫಾಲೋವರ್‌, ಹೆಮ್ಮೆಯ ಹಿಂದೂ ಎಂದು ಬರೆಯಲಾಗಿತ್ತು.

ಇದೀಗ ಈ ಖಾತೆಯನ್ನು ಡಿಲೀಟ್ ಮಾಡಲಾಗಿದ್ದು ಅದೇ ಚಿತ್ರವನ್ನು ಬಳಸಿಕೊಂಡು ‘ವಿನಿತಾ’ ಹೆಸರಲ್ಲಿ ಮತ್ತೆ ಎರಡು ಖಾತೆಗಳು ಟ್ವಿಟರ್‌ನಲ್ಲಿ ಸಕ್ರೀಯವಾಗಿದೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಝುಬೇರ್‌, ಕ್ಯೂಟ್‌ ‘ಹಿಂದೂಸ್ತಾನಿ’ ಹುಡುಗ @ vinita4india ಮುಗ್ಧ ಬಿಜೆಪಿ ಬೆಂಬಲಿಗರನ್ನು ಆಕರ್ಷಿಸಲು ‘ಇನ್ನೋಸೆಂಟ್‌ & ಕ್ಯೂಟ್‌ ಪಾಕಿಸ್ತಾನಿ ಗರ್ಲ್ಸ್’ ಪೇಜ್‌ನಿಂದ ಚಿತ್ರವನ್ನು ಪಡೆದಿದ್ದಾನೆ” ಎಂದು ಹೇಳಿದ್ದಾರೆ.

Join Whatsapp