ಪಾಕಿಸ್ತಾನ: ಪ್ರತಿಭಟನಕಾರರು ಭದ್ರತಾ ಪಡೆಗಳೊಂದಿಗೆ ನಡೆಸಿದ ಘರ್ಷಣೆಯಲ್ಲಿ ಮೂವರು ಮೃತ

Prasthutha|

ಪೇಷಾವರ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತದಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದು, ಈ ಘರ್ಷಣೆಯಲ್ಲಿ ಕನಿಷ್ಠ 3 ಮಂದಿ ಮೃತಪಟ್ಟಿದ್ದಾರೆ. ಸುಮಾರು 29 ಮಂದಿ ಗಾಯಗೊಂಡಿದ್ದಾರೆ.

- Advertisement -

ಬಲೂಚಿಸ್ತಾನ ಪ್ರಾಂತದ ಜನರ ಹಕ್ಕುಗಳಿಗಾಗಿ ಮತ್ತು ಪ್ರಾಂತದಲ್ಲಿನ ಪ್ರಾಕೃತಿಕ ಸಂಪನ್ಮೂಲದ ಸುರಕ್ಷತೆಗಾಗಿ ಆಗ್ರಹಿಸಿ ಬಲೂಚಿಸ್ತಾನ್ ಯಕ್‍ಜೆತಿ ಸಮಿತಿ(ಬಿವೈಸಿ) ಗ್ವದರ್ ನಗರದಲ್ಲಿ ರವಿವಾರ ಆಯೋಜಿಸಿದ ಧರಣಿಯಲ್ಲಿ ಈ ದುರಂತ ನಡೆದಿದೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಪಡೆ ಬ್ಯಾರಿಕೇಡ್‍ಗಳನ್ನು ನಿರ್ಮಿಸಿತ್ತು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಭದ್ರತಾ ಪಡೆಗಳ ಜತೆ ಘರ್ಷಣೆಗೆ ಇಳಿದು ಘರ್ಷಣೆ ನಡೆಯಿತು ಎಂದು ವರದಿಯಾಗಿದೆ.

- Advertisement -

ಪ್ರತಿಭಟನಾಕಾರರನ್ನು ಚದುರಿಸಲು ಲಾಠಿಜಾರ್ಚ್, ಅಶ್ರುವಾಯು ಪ್ರಯೋಗ ವಿಫಲವಾದಾಗ ರಬ್ಬರ್ ಬುಲೆಟ್‍ಗಳನ್ನು ಭದ್ರತಾ ಪಡೆ ಬಳಸಿದೆ.

ಭದ್ರತಾ ಪಡೆಗಳ ಗೋಲಿಬಾರ್ ಖಂಡಿಸಿ ಮತ್ಸುಂಗ್, ಕಲಾತ್, ನೋಶ್ಕಿ, ದಲ್ಬಾಂದಿನ್, ಲಸ್ಬೆಲಾ, ಚಗಾಯ್, ಟರ್ಬಟ್, ಗ್ವದರ್ ಸೇರಿದಂತೆ ಹಲವು ನಗರಗಳಲ್ಲಿ ಬಂದ್ ಆಚರಿಸಲಾಗಿದೆ.



Join Whatsapp