ಪೇಶಾವರ: ಪಾಕಿಸ್ತಾನದ ಹರಿಪುರ್ ಜಿಲ್ಲೆಯ ಸಿರಿಕೊಟ್ ಗ್ರಾಮದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತರಗತಿಗಳಲ್ಲಿ ಇದ್ದ ನೂರಾರು ವಿದ್ಯಾರ್ಥಿನಿಯರನ್ನು ಪಾರು ಮಾಡಲಾಗಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಶಾಲಾ ಕಟ್ಟಡದಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದ್ದು,ಬೆಂಕಿಯಿಂದಾಗಿ ಇಡೀ ಕಟ್ಟಡಕ್ಕೆ ಹಾನಿಯಾಗಿದೆ. ಆದರೆ1,400 ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ಹೊರಗೆ ಕರತರಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ಸುಮಾರು 1,400 ವಿದ್ಯಾರ್ಥಿನಿಯರನ್ನು ಹೊರತೆ ಕರೆತಂದಿದ್ದಾರೆ. ಕಟ್ಟಡದ ಶೇ 50ರಷ್ಟು ನಿರ್ಮಾಣಕ್ಕೆ ಮರ ಬಳಕೆಯಾಗಿತ್ತು. ಯಾವುದೇ ಜೀವಹಾನಿಯಾಗಿಲ್ಲ. ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು’ ಎಂದು ಅಗ್ನಿಶಾಮಕ ಇಲಾಖೆ ವಕ್ತಾರ ಫರಾಜ್ ಜಲಾಲ್ ತಿಳಿಸಿದ್ದಾರೆ.