ಪಾಕ್ ಪ್ರಧಾನಿ, ಗೃಹ ಸಚಿವ, ಸೇನಾಧಿಕಾರಿಯ ಯೋಜಿತ ಕೃತ್ಯ: ಇಮ್ರಾನ್ ಖಾನ್

Prasthutha|

ಇಸ್ಲಾಮಾಬಾದ್: ತನ್ನ ಹತ್ಯೆ ಯತ್ನದ ನಂತರ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಹಿರಿಯ ಸೇನಾ ಅಧಿಕಾರಿ ಮತ್ತು ಗೃಹ ಮಂತ್ರಿಯ ಮೇಲೆ ಕೇಸ್ ದಾಖಲಿಸಿದ್ದಾರೆ.

- Advertisement -

ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್, ಪ್ರಧಾನಿ ಶೇಬಾಝ್ ಶರೀಫ್, ಗೃಹಮಂತ್ರಿ ರಾಣಾ ಸನಾವುಲ್ಲಾ ಮತ್ತು ಮೇಜರ್ ಜನರಲ್ ಫೈಝಲ್ ನಸೀರ್ ಸೇರಿಕೊಂಡು ತಮ್ಮ ಹತ್ಯೆಗೆ ಸಂಚು ಹೂಡಿದ್ದರು ಎಂದು ಆರೋಪಿಸಿದ್ದಾರೆ.

ಎಫ್.ಐ.ಆರ್ ನಲ್ಲಿ ಕೊಲೆ ಪ್ರಯತ್ನ ಆರೋಪದ ಮೇಲೆ ಆ ದೇಶದ ಮೂವರು ಪ್ರಮುಖರ ಮೇಲೆ ಇಮ್ರಾನ್ ಖಾನ್ ಆರೋಪ ಹೊರಿಸಿದಾಗ  ಪೊಲೀಸರು ಕೇಸು ದಾಖಲಿಸಲು ಹಿಂದೇಟು ಹಾಕಿದ್ದರು. ಆದರೆ ಇದ್ಯಾವುದಕ್ಕೂ ಜಗ್ಗದ ಇಮ್ರಾನ್ ಆ ಹೆಸರುಗಳನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.

Join Whatsapp