ಲಾಹೋರ್: ರಾಜತಾಂತ್ರಿಕ ದಾಖಲೆಗಳನ್ನು ಅನಧಿಕೃತವಾಗಿ ಪ್ರದರ್ಶಿಸಿದ ಪ್ರಕರಣದಲ್ಲಿ ಕಳೆದ ವಾರ ಪಾಕಿಸ್ತಾನ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿದ್ದ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಬಿಡುಗಡೆಯಾಗಿದ್ದರು. ಆಗಲೇ ಅಡಿಯಾಲ ಜೈಲಿನ ಹೊರಗಡೆ ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದಾರೆ.
ಸಾರ್ವಜನಿಕ ಸುವ್ಯವಸ್ಥೆ ನಿರ್ವಹಣೆ ಕಾಯ್ದೆಯ ಅನ್ವಯ 15 ದಿನಗಳ ಬಂಧನಕ್ಕೆ ರಾವಲ್ಪಿಂಡಿ ಜಿಲ್ಲಾಧಿಕಾರಿ ಹಸನ್ ವಾಕರ್ ಚೀಮಾ ಆದೇಶದ ಮೇರೆಗೆ ಈ ಬಂಧನ ನಡೆದಿದೆ. ಈ ವೇಳೆ 67 ವರ್ಷದ ಖುರೇಷಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಖುರೇಷಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪರಮಾಪ್ತರಾಗಿದ್ದಾರೆ. ಎರಡು ಬಾರಿ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದರು.