ಪಾಕಿಸ್ತಾನದ ಮಾಜಿ ರಾಯಭಾರಿಯ ಮಗಳ ಅಪಹರಿಸಿ ಕೊಲೆ

Prasthutha|

ಇಸ್ಲಾಮಾಬಾದ್, ಜುಲೈ 22 : ಅಫ್ಘಾನಿಸ್ತಾನದ ರಾಯಭಾರಿಯ ಮಗಳ ಅಪಹರಣದ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ದ್ವಿಪಕ್ಷೀಯ ರಾಜತಾಂತ್ರಿಕ ಮಾತುಕತೆ ಮುರಿದುಬಿದ್ದ ನಂತರ ಬುಧವಾರ ಪಾಕಿಸ್ತಾನದ ಮಾಜಿ ರಾಜತಾಂತ್ರಿಕರ ಮಗಳನ್ನು ಇಸ್ಲಾಮಾಬಾದ್ ನಲ್ಲಿ ಭೀಕರವಾಗಿ ಕೊಲೆಮಾಡಲಾಗಿದೆ.

- Advertisement -

ಈ ಹಿಂದೆ ಕಝಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಶೌಕತ್ ಮುಕದ್ದಮ್ ರವರ ಪುತ್ರಿ ನೂರ್ ಮುಕದ್ದಮ್ (27) ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಭೀಕರವಾಗಿ ಕೊಲೆ ಮಾಡಿದ ರೀತಿಯಲ್ಲಿ ಪತ್ತೆಯಾಗಿದ್ದಾರೆಂದು ಮಾಧ್ಯಮ ವರದಿ ಮಾಡಿದೆ.

ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ನೂರ್ ಮುಕದ್ದಮ್ ರವರು ಕೊಲ್ಲಲ್ಪಟ್ಟಿದ್ದಾರೆಂದು ಮಾಧ್ಯಮದಲ್ಲಿ ಉಲ್ಲೇಖಿಸಲಾಗಿದೆ. ಹತ್ಯೆಯಲ್ಲಿ ಭಾಗಿಯಾಗಿದ್ದ ಜಹೀರ್ ಜಾಫರ್ ಎಂಬ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಇಸ್ಲಾಮಾಬಾದ್ ಪೊಲೀಸರನ್ನು ಉಲ್ಲೇಖಿಸಿ ಇಸ್ಲಾಮಾಬಾದ್ ಮೂಲದ ಟಿವಿ ಚಾನೆಲ್ ವೊಂದು ತಿಳಿಸಿದೆ.

- Advertisement -

ಪಾಕಿಸ್ತಾನದ ರಾಜತಾಂತ್ರಿಕ ಕಾರ್ಯಾಚರಣೆ ಮತ್ತು ಅದರ ಸಿಬ್ಬಂದಿಗಳ ಸುರಕ್ಷತೆಯ ಕುರಿತು ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಭೀಕರ ಹತ್ಯೆ ನಡೆದಿದೆ.

ಜುಲೈ 16 ರಂದು ಪಾಕಿಸ್ತಾನದ ಅಫ್ಘಾನ್ ರಾಯಭಾರಿಯಾಗಿದ್ದ ನಜೀಬುಲ್ಲಾ ಅಲಿಖಿಲ್ ಅವರ 26 ವರ್ಷದ ಮಗಳು ಸಿಲ್ಸಿಲಾ ಅಲಿಖಿಲ್ ಅವರನ್ನು ಇಸ್ಲಾಮಾಬಾದ್ ನಿಂದ ಅಪಹರಿಸಿ ಹಿಂಸಿಸಲಾಗಿತ್ತು.ಈ ಬೆಳವಣಿಗೆಯು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಮಾತುಕತೆಗೆ ತೊಡಕುಂಟಾಗುವ ಸಾಧ್ಯತೆಯಿದೆ.

ಅಫ್ಘಾನಿಸ್ತಾನ ಮಾಡಿದ ಆರೋಪಗಳನ್ನು ಪಾಕಿಸ್ತಾನ ತೀವ್ರವಾಗಿ ನಿರಾಕರಿಸಿದೆ ಮತ್ತು ಇಸ್ಲಾಮಾಬಾದ್‌ನಲ್ಲಿರುವ ಪೊಲೀಸರು ಅಪಹರಣಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.



Join Whatsapp