ನವದೆಹಲಿ: ಹಜ್ ಯಾತ್ರೆ ಕೈಗೊಳ್ಳಲು ಕಾಲ್ನಡಿಗೆಯಲ್ಲಿ ತೆರಳಿದ್ದ ಮಲಪ್ಪುರಂ ಮೂಲದ ಶಿಹಾಬ್ ಅವರ ಪರವಾಗಿ ಪಾಕಿಸ್ತಾನ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ನ್ಯಾಯಾಲಯ ತಿರಸ್ಕರಿಸಿದೆ.
ಕಳೆದ ತಿಂಗಳು ಶಿಹಾಬ್ ಅವರು ಸುಮಾರು 3,000 ಕಿ.ಮೀ. ಪ್ರಯಾಣಿಸಿ ವಾಘಾ ಗಡಿ ತಲುಪಿದ್ದರು. ಆದರೆ ವಾಘಾ ಗಡಿಯಲ್ಲಿ ಪಾಕಿಸ್ತಾನದ ವಲಸೆ ಅಧಿಕಾರಿ ವೀಸಾ ಇಲ್ಲದ ಕಾರಣ ಅವರನ್ನು ತಡೆದಿದ್ದಾರೆ. ಬಳಿಕ ಪಾಕಿಸ್ತಾನದ ಪ್ರಜೆಯಾಗಿರುವ ಸರ್ವರ್ ತಾಜ್ ಅವರು ಶಿಹಾಬ್ ಗೆ ವೀಸಾ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯ ವಿಚಾರಣೆ ಕೈಗೆತ್ತಿಕೊಂಡ ಲಾಹೋರ್ ಹೈಕೋರ್ಟ್ ವೀಸಾ ನೀಡಲು ನಿರಾಕರಿಸಿದೆ.
ನ್ಯಾಯಮೂರ್ತಿ ಚೌಧರಿ ಮುಹಮ್ಮದ್ ಇಕ್ಬಾಲ್ ಮತ್ತು ನ್ಯಾಯಮೂರ್ತಿ ಮುಸಮಿಲ್ ಅಖ್ತರ್ ಶಬೀರ್ ಅವರನ್ನು ಒಳಗೊಂಡ ಲಾಹೋರ್ ಹೈಕೋರ್ಟ್ ವಿಭಾಗೀಯ ಪೀಠ, ಶಿಹಾಬ್ ಪರ ಅರ್ಜಿ ಸಲ್ಲಿಸಿದವರು ಭಾರತೀಯ ಪ್ರಜೆಯಲ್ಲ. ನ್ಯಾಯಾಲಯವನ್ನು ಸಂಪರ್ಕಿಸಲು ಅವರು ಅಧಿಕಾರ ಹೊಂದಿಲ್ಲ ಎಂದು ಹೇಳಿದೆ.