ಐರ್ಲೆಂಡನ್ನು 3 ವಿಕೆಟ್​ಗಳಿಂದ ಮಣಿಸಿ ಟೂರ್ನಿಗೆ ಗೆಲುವಿನ ವಿದಾಯ ಹೇಳಿದ ಪಾಕಿಸ್ತಾನ

Prasthutha|

ಲೌಡೆರ್​ಹಿಲ್​: ಸೆಂಟ್ರಲ್​ ಬ್ರೋವರ್ಡ್​ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​ನ ತನ್ನ 4ನೇ ಹಾಗೂ ಕೊನೇ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ ಐರ್ಲೆಂಡ್​ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದೆ. ಈ ಮೂಲಕ ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ.

- Advertisement -

: ಎಡಗೈ ವೇಗಿ ಶಹೀನ್​ ಷಾ ಅಫ್ರಿದಿ (22ಕ್ಕೆ 3), ಎಡಗೈ ಸ್ಪಿನ್ನರ್​ ಇಮಾದ್​ ವಾಸಿಂ (8ಕ್ಕೆ 3) ಮಾರಕ ಬೌಲಿಂಗ್​ ಹಾಗೂ ನಾಯಕ ಬಾಬರ್​ ಅಜಮ್​ (32*ರನ್​, 34 ಎಸೆತ, 2 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್​ ನೆರವಿನಿಂದ ಪಾಕಿಸ್ತಾನ ಔಪಚಾರಿಕ ಪಂದ್ಯದಲ್ಲಿ ಐರ್ಲೆಂಡನ್ನು ಸೋಲಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಐರ್ಲೆಂಡ್​, ಶಹೀನ್​ ಹಾಗೂ ಮೊಹಮದ್​ ಅಮೀರ್​ (11ಕ್ಕೆ 2) ದಾಳಿಗೆ ನಲುಗಿ 32 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿತು. ಆಗ ಗರೆಥ್​ ಡೆಲಾನಿ (31 ರನ್​,19 ಎಸೆತ, 1 ಬೌಂಡರಿ, 3 ಸಿಕ್ಸರ್​) ಆಸರೆಯಲ್ಲಿ 9 ವಿಕೆಟ್​ಗೆ 106 ರನ್​ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಪಾಕ್​ ಒಂದು ಹಂತದಲ್ಲಿ 62 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸೋಲಿನ ಭೀತಿ ಎದುರಿಸಿದರೂ, ಬಾಬರ್​ ಅಜಮ್​ ರಕ್ಷಣೆಯಲ್ಲಿ 18.5 ಓವರ್​ಗಳಲ್ಲಿ 7 ವಿಕೆಟ್​ಗೆ 111 ರನ್​ ಗಳಿಸಿ ಸಮಾಧಾನಕರ ಗೆಲುವು ಕಂಡಿತು.

- Advertisement -

ಬಾಬರ್​ ಮತ್ತು ಅಬ್ಬಾಸ್​ ಅಫ್ರಿದಿ (17) 7ನೇ ವಿಕೆಟ್​ಗೆ 40 ಎಸೆತಗಳಲ್ಲಿ 33 ರನ್​ ಪೇರಿಸಿ ಪಾಕ್​ ತಂಡವನ್ನು ಆಘಾತಕಾರಿ ಸೋಲಿನಿಂದ ಪಾರು ಮಾಡಿದರು.



Join Whatsapp