ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಲವು ‘ಭಯೋತ್ಪಾದನೆ’ ಪ್ರಕರಣಗಳ ತನಿಖೆ ನಡೆಸಿದ ಹಿರಿಯ NIA ಅಧಿಕಾರಿಯ ವಿರುದ್ಧವೇ ಸಂಸ್ಥೆ ತನಿಖೆ ನಡೆಸುತ್ತಿದೆ.
NIA ಪತ್ತೆ ಹಚ್ಚಿದ ಕೆಲ ಮಾಹಿತಿಗಳನ್ನು ಸಂಸ್ಥೆಯ ಮಾಜಿ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿ ಮಾನವ ಹಕ್ಕುಗಳ ಕಾರ್ಯಕರ್ತನಾದ ಖುರಮ್ ಪರ್ವೇಝ್ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ರವಾನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಖುರಮ್ ಪರ್ವೇಝ್ ನನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಕಳೆದ ಸೋಮವಾರ ಬಂಧಿಸಲಾಗಿತ್ತು. ಕಾಶ್ಮೀರ ಪೊಲೀಸ್ ನಿಂದ NIAಗೆ ನಿಯೋಜಿತನಾಗಿದ್ದ ಅರವಿಂದ್ ಗೆ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಪೊಲೀಸ್ ಪದಕವನ್ನು ನೀಡಲಾಗಿತ್ತು.
ಇತ್ತೀಚೆಗೆ ನೇಗಿ, ಪರ್ವೇಝ್ ನಿವಾಸಗಳು ಹಾಗೂ ಕಚೇರಿಗಳಿಗೆ NIA ದಾಳಿ ನಡೆಸಿತ್ತು.