ಅಕ್ಟೋಬರ್ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಲಾ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಪಾಕಿಸ್ತಾನ ತಂಡವನ್ನು ಬಾಬರ್ ಅಝಂ ಮತ್ತು ಅಫ್ಘಾನಿಸ್ತಾನ ತಂಡವನ್ನು ಮುಹಮ್ಮದ್ ನಬಿ ಮುನ್ನಡೆಸಲಿದ್ದಾರೆ.
ಇತ್ತೀಚಿಗೆ ಯುಎಇಯಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಿದ್ದ ತಂಡವನ್ನೇ ಬಹುತೇಕ ಉಭಯ ತಂಡಗಳು ಉಳಿಸಿಕೊಂಡಿವೆ.
ಆದರೆ ಏಷ್ಯಾ ಕಪ್ನಲ್ಲಿ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದ ಫಖರ್ ಝಮಾನ್, ವಿಶ್ವ ಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಅನುಭವಿ ಶೊಯೆಬ್ ಮಲಿಕ್ ರನ್ನು ಆಯ್ಕೆ ಸಮಿತಿ ಮತ್ತೊಮ್ಮೆ ಕಡೆಗಣಿಸಿದೆ.
ಶಾದಾಬ್ ಖಾನ್ ಉಪನಾಯಕನ ಸ್ಥಾನ ನಿರ್ವಹಿಸಲಿದ್ದಾರೆ.
ಗಾಯಾಳು ಶಾಹಿನ್ ಅಫ್ರಿದಿ ಜೊತೆಗೆ ನಸೀಮ್ ಶಾ, ಹ್ಯಾರಿಸ್ ರೌಫ್, ಮುಹಮ್ಮದ್ ಹಸ್ನೈನ್ ವೇಗದ ಬೌಲಿಂಗ್ ವಿಭಾಗವನ್ನು ನಿರ್ವಹಿಸಲಿದ್ದಾರೆ.
ಶಹನವಾಜ್ ದಹಾನಿ ಅವರನ್ನು ಮೀಸಲು ಆಟಗಾರನಾಗಿ ಹೆಸರಿಸಲಾಗಿದೆ.
ಪಾಕ್ ಟೆಸ್ಟ್ ತಂಡದ ಆರಂಭಿಕ ಶಾನ್ ಮಸೂದ್, 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
T20 ವಿಶ್ವಕಪ್ ಗೆ ಪಾಕಿಸ್ತಾನ ತಂಡ: ಬಾಬರ್ ಅಝಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಷಾ, ಮುಹಮ್ಮದ್ ಹಸ್ನೈನ್, ಮುಹಮ್ಮದ್ ನವಾಝ್, ಮುಹಮ್ಮದ್ ರಿಝ್ವಾನ್, ಮುಹಮ್ಮದ್ ವಾಸಿಮ್, ನಸೀಮ್ ಶಾಹ್ರಿ, ಶಾಹಿನ್ ಶಾಹಿ, , ಶಾನ್ ಮಸೂದ್, ಉಸ್ಮಾನ್ ಖಾದಿರ್
ಮೀಸಲು ಆಟಗಾರರು : ಫಖರ್ ಝಮಾನ್, ಮುಹಮ್ಮದ್ ಹ್ಯಾರಿಸ್, ಶಹನವಾಝ್ ದಹಾನಿ
ಅಫ್ಘಾನಿಸ್ತಾನ ತಂಡ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಜದ್ರಾನ್ (ಉಪನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಅಝ್ಮತುಲ್ಲಾ ಒಮರ್ಝಾಯ್, ದರ್ವಿಶ್ ರಸೂಲಿ, ಫರೀದ್ ಅಹ್ಮದ್ ಮಲಿಕ್, ಫಝಲ್ ಹಕ್ ಫಾರೂಕಿ, ಹಝರತುಲ್ಲಾ ಝಜೈ, ಇಬ್ರಾಹಿಂ ನವ್ ಝದ್ರಾನ್, ಹಝರತುಲ್ಲಾ ಝಾಝೈ, ಇಬ್ರಾಹಿಂ ನವ್ ಝದ್ರಾನ್ ಅಹ್ಮದ್, ರಶೀದ್ ಖಾನ್, ಸಲೀಂ ಸಫಿ ಮತ್ತು ಉಸ್ಮಾನ್ ಘನಿ
ಭಾರತ, ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಗೆ ತಂಡಗಳನ್ನು ಪ್ರಕಟಿಸಿದೆ.