ವಿಟ್ಲ: ತನಗೆ ಸಿಕ್ಕ ಬರಡು ಭೂಮಿಯನ್ನು ಏಕಾಂಗಿಯಾಗಿ ತನ್ನ ದೈಹಿಕ ಶ್ರಮದ ಮೂಲಕ ಏಳು ಸುರಂಗಗಳನ್ನು ಕೊರೆದು ಪಾಲು ಭೂಮಿಯನ್ನು ಹೊನ್ನಾಗಿ ಮಾರ್ಪಾಡುಗೊಳಿಸಿದ ಶ್ರಮಜೀವಿ,ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ರವರ ಈ ಸಾಧನೆ ಗೆ ದೇಶದ ಅತ್ಯುನ್ನತ “ಪದ್ಮಶ್ರೀ” ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
ತಮ್ಮ ನಾಡಿನ ಕೀರ್ತಿಯನ್ನು ಎತ್ತರಕ್ಕೆ ಏರಿಸಿದ ಅಪ್ರತಿಮ ಸಾದಕನನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಸಮಿತಿಯು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಅಧ್ಯಕ್ಷ ಫಯಾಝ್ ವಿಟ್ಲ, ಕಾರ್ಯದರ್ಶಿ ಮುಕ್ತಾರ್ ಕಲ್ಲಡ್ಕ ಹಾಗೂ ವಿಟ್ಲ ವಲಯ ಕಾರ್ಯದರ್ಶಿ ತಷ್ವೀಕ್ ಉಪಸ್ಥಿತರಿದ್ದರು.