ಪದ್ಮಭೂಷಣ ಪುರಸ್ಕೃತೆ ,ಮಹಿಳಾ ಪರ ಹೋರಾಟಗಾರ್ತಿ ಅಡ್ವಕೇಟ್ ಇಳಾ ಭಟ್ ನಿಧನ

Prasthutha|

ಗಾಂಧಿನಗರ: ಮಹಿಳಾ ಪರ ಹೋರಾಟಗಾರ್ತಿ ,ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಕೀಲೆ ಇಳಾ ಭಟ್ ತನ್ನ 89 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

- Advertisement -

ಗಾಂಧಿವಾದಿ ಚಿಂತನೆಯ ಮೂಲಕ ಹೋರಾಟ ರಂಗದಲ್ಲಿ ತನ್ನನ್ನು ತಾನು ತೊಡಗಿಸಿದ ಇಳಾ, ಮಹಿಳೆಯರ ಆರ್ಥಿಕ ಸಬಲೀಕರಣದ ಪರವಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ದೇಶದ ಮೊಟ್ಟ ಮೊದಲ ಮಹಿಳಾ ಬ್ಯಾಂಕ್ ಕೋ ಆಪರೇಟಿವ್ ಬ್ಯಾಂಕ್ ಆಫ್ ಸೇವಾ ಅನ್ನು 1973ರಲ್ಲಿ ಹುಟ್ಟುಹಾಕಿದರು. ಇವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದ್ದಾರೆ.

- Advertisement -

1985 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ಗೌರವವಾದ ಪದ್ಮಶ್ರೀ, 1986ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ಭೂಷಣ, 2011ರಲ್ಲಿ ಗಾಂಧಿ ಶಾಂತಿ ಪ್ರಶಸ್ತಿ, 1977ರಲ್ಲಿ ಅವರು ಸಮುದಾಯ ನಾಯಕತ್ವಕ್ಕಾಗಿ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಇಳಾ ಭಟ್ ತನ್ನದಾಗಿಸಿಕೊಂಡಿದ್ದಾರೆ.

Join Whatsapp