ಕೋಲ್ಕತ್ತಾ; ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಹಿನ್ನೆಡೆಯಾಗಿದ್ದು, ತೃಣಮೂಲ ಕಾಂಗ್ರೆಸ್‌ನ ಇಬ್ಬರು ಹಾಲಿ ಸಂಸದರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬರಾಕ್‌ಪುರ ಸಂಸದ ಅರ್ಜುನ್ ಸಿಂಗ್ ಮತ್ತು ತಮ್ಲುಕ್ ಸಂಸದ ದಿಬ್ಯೇಂದು ಅಧಿಕಾರಿ ಅವರಿಗೆ ಈ ಬಾರಿ ಟಿಎಂಸಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಸೇರಿದ್ದಾರೆ.
ಬಿಜೆಪಿ ನಾಯಕರಾದ ದುಷ್ಯಂತ್ ಗೌತಮ್ ಮತ್ತು ಅಮಿತ್ ಮಾಳವೀಯ ಸಮ್ಮುಖದಲ್ಲಿ ಈ ಇಬ್ಬರು ಸಂಸದರು ಬಿಜೆಪಿಗೆ ಸೇರಿದರು.