ಗುರುಗಾಂವ್: ಭಾರತವನ್ನು ಹಿಂದೂ ರಾಷ್ಟ್ರವಾಗಿಸಲು ನಾವು ಕೊಲೆಗೈಯ್ಯಲೂ, ಬಲಿದಾನಕ್ಕೂ ಸಿದ್ಧವಾಗಬೇಕಾಗಿದೆ ಎಂದು ಸುದರ್ಶನ್ ಟಿವಿ ಮಾಲಿಕ ಸುರೇಶ್ ಚವ್ಹಾಂಕೆ ನೇತೃತ್ವದಲ್ಲಿ ಸಂಘಪರಿವಾರದ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನ್ನ ದ್ವೇಷ ಭಾಷಣದ ಬಳಿಕ ಹರ್ಯಾಣದ ಅಂಬಾಲಾದಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಸುರೇಶ್ ಚವ್ಹಾಂಕೆ, ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಜ್ಞೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ವೀಡಿಯೋದಲ್ಲಿ, ‘ಭಾರತವನ್ನು ಹಿಂದೂರಾಷ್ಟ್ರವಾಗಿ ಪರಿವರ್ತಿಸಲು ಅಗತ್ಯ ಬಂದರೆ ಪ್ರಾಣತ್ಯಾಗ, ಬಲಿದಾನಕ್ಕೂ ಸಿದ್ಧವಿದ್ದೇವೆ. ಅಗತ್ಯಬಿದ್ದಲ್ಲಿ ಹತ್ಯೆಗೆಯ್ಯಲು ಸಿದ್ಧರಾಗಿದ್ದೇವೆ ಎಂದು ಪ್ರತಿಜ್ಞೆ ಮಾಡುತ್ತಿರುವುದು ವೀಡಿಯೊದಲ್ಲಿದೆ.
ಸಂಘಪರಿವಾರದ ಈ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.