ನವದೆಹಲಿ: ಸಂಸದ ಅಸದುದ್ದೀನ್ ಉವೈಸಿ ಮೇಲೆ ಗುಂಡು ಹಾರಿಸಿದ ಆರೋಪಿ ಬಿಜೆಪಿ ಕಾರ್ಯಕರ್ತ ಸಚಿನ್ ಪಂಡಿತ್ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಇನ್ನು ಮುಂದೆಯೂ ಉವೈಸಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ತನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನ್ನನ್ನು ಗಲ್ಲಿಗೇರಿಸಿದರೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ಅವನಿಗೆ ಒಂದು ಸಂದೇಶವನ್ನು ನೀಡಲು ಬಯಸುತ್ತೇನೆ. ಯಾರೂ ತಮಗೆ ಯಾವುದೇ ಹಾನಿಯನ್ನು ಮಾಡಲಾರರು ಎಂಬ ಅಹಂಕಾರವನ್ನು ಯಾರೂ ಹೊಂದಿರಬಾರದು. ಮೋದಿ ಮತ್ತು ಯೋಗಿಯ ವಿರುದ್ಧ ಅವಮಾನಕರ ಹೇಳಿಕೆಯನ್ನು ಸಹಿಸುವುದಿಲ್ಲ. ನಮ್ಮ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೇಗೆ ಕೊಲ್ಲಲು ಸಾಧ್ಯವಾಯಿತೋ ಇನ್ನು ಮುಂದೆಯೂ ಉವೈಸಿಯನ್ನು ಕೊಲ್ಲುವುದಾಗಿ ಸಚಿನ್ ಪಂಡಿತ್ ಬೆದರಿಕೆ ಹಾಕಿದ್ದಾರೆ.
ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಆದರೆ ಹಿಂದುತ್ವವನ್ನು ಬಲಪಡಿಸುವುದು ನನ್ನ ವೈಯಕ್ತಿಕ ಧ್ಯೇಯವಾಗಿದೆ ಎಂದಿದ್ದಾನೆ.
ಕಾನೂನು ವಿದ್ಯಾರ್ಥಿ ಮತ್ತು ಬಿಜೆಪಿ ಸದಸ್ಯ, 27 ವರ್ಷದ ಸಚಿನ್ ಮತ್ತು 22 ವರ್ಷದ ಶುಭಂ ಗುಜ್ಜರ್ ಅವರನ್ನು ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಅವರ ವಾಹನದ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದಾಗಿನಿಂದ ಅವರನ್ನು ಹಿಂದುತ್ವ ಶಕ್ತಿಗಳು ಅಭಿನಂದಿಸುತ್ತಿವೆ.