ʼಜೈ ಫೆಲೆಸ್ತೀನ್ʼ ಘೋಷಣೆ ಕೂಗಿದ ಒವೈಸಿ: ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ರಾಷ್ಟ್ರಪತಿಗೆ ದೂರು

Prasthutha|

ನವದೆಹಲಿ: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ನಾಯಕ ಅಸಾದುದ್ದೀನ್ ಒವೈಸಿ ಮಂಗಳವಾರ ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ ಅವರು ʼಜೈ ಫೆಲೆಸ್ತೀನ್ʼಎಂದು ಘೋಷಣೆ ಕೂಗಿದ್ದಾರೆ. ಈ ಹಿನ್ನೆಲೆ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಲಾಗಿದೆ.

- Advertisement -


ಜೈ ಫೆಲೆಸ್ತೀನ್ ಎಂದು ಘೋಷಣೆ ಕೂಗಿದ ಎಐಎಂಐಎಂ ಸಂಸದ ಓವೈಸಿ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಮಂಗಳವಾರ ರಾತ್ರಿ ತಿಳಿಸಿದ್ದಾರೆ. “ಭಾರತೀಯ ಸಂವಿಧಾನದ 102 ಮತ್ತು 103 ನೇ ವಿಧಿಯ ಪ್ರಕಾರ ಅಸಾದುದ್ದೀನ್ ಓವೈಸಿ ವಿರುದ್ಧ ಹರಿಶಂಕರ್ ಜೈನ್ ಅವರು ಸಂಸತ್ತಿನ ಸದಸ್ಯರಾಗಿ ಅನರ್ಹಗೊಳಿಸುವಂತೆ ಕೋರಿ ಭಾರತದ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.


ಪ್ರಮಾಣವಚನ ಸ್ವೀಕರಿಸಲು ಅಸದುದ್ದೀನ್ ಉವೈಸಿ ಅವರನ್ನು ಕರೆದ ವೇಳೆ ಬಿಜೆಪಿ ಸದಸ್ಯರು ಭಾರತ್ ಮಾತಾ ಕೀ ಜೈ, ಜೈ ಶ್ರೀರಾಂ ಘೋಷಣೆ ಕೂಗಿದರು. ವೇದಿಕೆಯೇರಿದ ಉವೈಸಿಯವರು ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಅವರು, ಜೈ ಭೀಮ್, ಜೈಮಮ್, ಜೈ ತೆಲಂಗಾಣ, ಜೈ ಫೆಲೆಸ್ತೀನ್, ತಕ್ಬೀರ್ ಅಲ್ಲಾಹು ಅಕ್ಬರ್ ಎಂದು ನಿರ್ಗಮಿಸಿದರು.

- Advertisement -


ಅಸಾದುದ್ದೀನ್ ಓವೈಸಿ ತಾನು ಪ್ರಮಾಣ ವಚನದ ವೇಳೆ ಘೋಷಣೆ ಕೂಗಿದ ಬಗ್ಗೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಓವೈಸಿ ಅವರು, ಇನ್ನುಳಿದ ಸದಸ್ಯರೂ ಬೇರೆ ಬೇರೆ ಮಾತುಗಳನ್ನಾಡಿದ್ದಾರೆ. ನಾನು ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಫೆಲೆಸ್ತೀನ್ ಎಂದು ಹೇಳಿದ್ದೇನೆ. ಇದು ಹೇಗೆ ತಪ್ಪಾಗುತ್ತದೆ. ಸಂವಿಧಾನದಲ್ಲಿ ತಪ್ಪು ಅನ್ನೋದು ಎಲ್ಲಿದೆ? ಬೇರೆಯವರು ಏನು ಹೇಳಿದ್ದಾರೆ ಅನ್ನೋದನ್ನೂ ನೀವು ಕೇಳಬೇಕು. ನಾನು ಏನು ಹೇಳಬೇಕೋ ಅದನ್ನು ಹೇಳಿದೆ. ಮಹಾತ್ಮ ಗಾಂಧೀಜಿ ಅವರು ಫೆಲೆಸ್ತೀನ್ ಬಗ್ಗೆ ಹೇಳಿದ್ದು ಏನು ಅದನ್ನು ನೀವು ಓದಲೇಬೇಕು’ ಎಂದು ಹೇಳಿದರು.

Join Whatsapp