ಮೋದಿಯ ಮೇಲಿಟ್ಟ ಅತಿಯಾದ ಆತ್ಮವಿಶ್ವಾಸವೇ ನಮ್ಮನ್ನು ಸೋಲಿಸಿತು: ಬಿಜೆಪಿ ವಿರುದ್ಧ ಸದಾನಂದ ಗೌಡ ಕಿಡಿ

Prasthutha|

ಬೆಂಗಳೂರು: ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಬಳಿಕ, ಪಕ್ಷದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಮೋದಿ ಇಮೇಜ್ ಮೇಲೆ ಚುನಾವಣೆ ನಡೆದುಬಿಡುತ್ತೆ ಅಂತ ಓವರ್ ಕಾನ್ಪಿಡೆನ್ಸ್‌ನಿಂದಾಗಿ ನಮ್ಮ 9 ಸ್ಥಾನ ಕಳೆದುಕೊಳ್ಳಬೇಕಾಯ್ತು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು” ಎಂದು ಮಾಜಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಸದಾನಂದ ಗೌಡ ಕಿಡಿಕಾರಿದ್ದಾರೆ.

- Advertisement -

ನಮ್ಮ ಪಕ್ಷ ಇಷ್ಟು ಇಷ್ಟು ಹಾಳಾಗಲು ಕಾರಣ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳದಿರುವುದು. ಮಾತಾಡುವವರಿಗೆ ಮಣೆ ಹಾಕ್ತಾರೆ. ಹಾಗೆ ಮಾತಾಡುವವರನ್ನು ಹಾಗೆ ಮಾಡಬೇಡ ಅಂತ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವೇ ಅವರನ್ನು ಪಕ್ಷದಿಂದ ದೂರ ಇಡಬೇಕು. ನಾನು ಪಕ್ಷದ ಅಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಯತ್ನಾಳ್ ಅವರನ್ನ ಸಸ್ಪೆಂಡ್ ಮಾಡಿದ್ದೇನೆ. ಎಷ್ಟೇ ದೊಡ್ಡವರಾಗಿದ್ರೂ ಪಕ್ಷ ವಿರೋಧಿ ಆದವರನ್ನು ಬಿಡುತ್ತಿರಲಿಲ್ಲ ಎಂದು ಸದಾನಂದ ಗೌಡ ಹೇಳಿದ್ದಾರೆ.

ನಾನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜೊತೆ ಇದೇ ವಿಚಾರ ಚರ್ಚೆ ಮಾಡಿದ್ದೇನೆ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ಪಕ್ಷದ ಸಂಘಟನೆಗೆ ಆಕ್ಸಿಲರೇಟರ್ ಕೊಟ್ಟಂತೆ ಆಗ್ತಿತ್ತು. ನಾನು ಅಧ್ಯಕ್ಷ ಆಗಿದ್ದಾಗ ಯಡಿಯೂರಪ್ಪ ಅವರದ್ದು ಒಂದು ಗುಂಪು, ಅನಂತ್ ಕುಮಾರ್ ಅವರದ್ದು ಒಂದು ಗುಂಪು ಇತ್ತು. ನಾನು ಯಾವ ಗುಂಪನ್ನೂ ಸೇರದೆ ಕೆಲಸ ಮಾಡಿದೆ. ಇದರಿಂದಾಗಿ ನನ್ನನ್ನು ದೂರ ಮಾಡಿದರು. ಮೊನ್ನೆ ಕಾಂಗ್ರೆಸ್ ಪಕ್ಷದ ನಾಯಕ ನನ್ನನ್ನು ಅವರ ಪಕ್ಷಕ್ಕೆ ಆಹ್ವಾನಿಸಿದರು. ನಾಲ್ಕು ಶರ್ಟು, ಪ್ಯಾಂಟ್ ತನ್ನಿ ಅಂತ ಅಂದರು. ನಾನು ಮತ್ತೊಬ್ಬ ಜಗದೀಶ್ ಶೆಟ್ಟರ್ ಆಗಲು ಇಷ್ಟ ಇಲ್ಲ ಎಂದೆ” ಎಂದು ಗೌಡ ಹೇಳಿದರು.



Join Whatsapp