2011ರಿಂದ ಭಾರತೀಯ ಪೌರತ್ವ ತ್ಯಜಿಸಿದ ಪ್ರಜೆಗಳೆಷ್ಟು ಗೊತ್ತಾ?

Prasthutha|

2011ರಿಂದ 16 ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದು, ಈ ಪೈಕಿ ಕಳೆದ ಒಂದು ವರ್ಷದಲ್ಲೇ 2,25,620 ಮಂದಿ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ.

- Advertisement -

ಪ್ರಶ್ನೆಯೊಂದಕ್ಕೆ ರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, 2015 ರಲ್ಲಿ 1,31,489 ಮಂದಿ, 2016 ರಲ್ಲಿ 1,41,603 ಪ್ರಜೆಗಳು ಮತ್ತು 2017ರಲ್ಲಿ 1,33,049 ಜನರು ತಮ್ಮ ಪೌರತ್ವ ತೊರೆದಿದ್ದಾರೆ ಎಂದು ಹೇಳಿದರು.

2011ರಲ್ಲಿ 1,22,819 ಆಗಿದ್ದರೆ, 2012ರಲ್ಲಿ 1,20,923, 2013ರಲ್ಲಿ 1,31,405 ಮತ್ತು 2014 ರಲ್ಲಿ 1,29,328 ಆಗಿತ್ತು. 2018ರಲ್ಲಿ 1,34,561 ಮಂದಿ, 2019ರಲ್ಲಿ 1,44,017, 2020ರಲ್ಲಿ 85,256 ಮತ್ತು 2021ರಲ್ಲಿ 1,63,370 ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. 2011ರಿಂದ ಒಟ್ಟು 16,63,440 ಮಂದಿ ಭಾರತೀಯ ಪೌರತ್ವ ತ್ಯಜಿಸಿದ್ದಾರೆ ಎಂದು ಸಚಿವರು ತಿಳಿಸಿದರು.

- Advertisement -

ಕಳೆದ ಮೂರು ವರ್ಷಗಳಲ್ಲಿ ಐವರು ಭಾರತೀಯ ಪ್ರಜೆಗಳು ಯುಎಇ ಪೌರತ್ವವನ್ನು ಪಡೆದಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಜೊತೆಗೆ ಭಾರತೀಯರು ಪೌರತ್ವ ಪಡೆದ 135 ದೇಶಗಳ ಪಟ್ಟಿಯನ್ನೂ ಕೂಡ ಜೈಶಂಕರ್ ಒದಗಿಸಿದ್ದಾರೆ.



Join Whatsapp