ಲಖನೌ: ಜೈಲಿನಿಂದ ಬಿಡುಗಡೆಯಾದ ಕೂಡಲೇ ನನ್ನನ್ನು ಎನ್ಕೌಂಟರ್ ಮಾಡಲಾಗುವುದೆಂದು ಬೆದರಿಕೆ ಹಾಕಲಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಅಝಾಮ್ ಖಾನ್ ಆರೋಪಿಸಿದ್ದಾರೆ.
ಇಂದು ಉತ್ತರ ಪ್ರದೇಶದ ರಾಂಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ಸ್ ಪೆಕ್ಟರ್ ನನಗೆ ನಿಮ್ಮ ವಿರುದ್ಧ ಹಲವಾರು ಪ್ರಕರಣಗಳಿದ್ದು, ಈ ನಿಟ್ಟಿನಲ್ಲಿ ತಕ್ಷಣ ಭೂಗತರಾಗಿ. ಇಲ್ಲದೇ ಹೋದಲ್ಲಿ ಎನ್ಕೌಂಟರ್ ಮಾಡಲಾಗುವುದೆಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಎರಡು ವರ್ಷಗಳಿಂದ ಜೈಲಿನಲ್ಲಿದ್ದ ರಾಂಪುರ ಸಂಸದ ಅಝಾಮ್ ಖಾನ್ ಕಳೆದ ಶುಕ್ರವಾರ ಬೆಳಿಗ್ಗೆ ಸೀತಾಪುರ ಜೈಲಿನಿಂದ ಬಿಡುಗಡೆಗೊಂಡಿದ್ದರು. ಸಂವಿಧಾನ 142 ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಚಲಾಯಿಸುವ ಮೂಲಕ ಸುಪ್ರೀಮ್ ಕೋರ್ಟ್ ಜಾಮೀನು ನೀಡಿದೆ.
ಅಝಾಮ್ ಖಾನ್ ವಿರುದ್ಧ ಸುಮಾರು 81 ಕೇಸ್ ದಾಖಲಿಸಿ ಜೈಲಿನಲ್ಲಿರಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದು ಆಝಾಮ್ ಖಾನ್ ಇಂದು ಬಿಡುಗಡೆಗೊಂಡಿದ್ದಾರೆ ಎಂದು ಸೀತಾಪುರ ಜಿಲ್ಲಾ ಜೈಲು ಅಧೀಕ್ಷಕ ಸುರೇಶ್ ಸಿಂಗ್ ತಿಳಿಸಿದ್ದರು.