ಹೊಸದಿಲ್ಲಿ: ಮಣಿಪುರದ ನೂತನ ವಿಧಾನಸಭೆಯ 60 ಶಾಸಕರ ಪೈಕಿ 48 ಮಂದಿ ಕೋಟ್ಯಾಧಿಪತಿಗಳು ಎಂದು ಅಂಕಿ ಅಂಶದಿಂದ ಬಹಿರಂಗವಾಗಿದೆ.
ಜಯಗಳಿಸಿದ ಅಭ್ಯರ್ಥಿಗಳ ಸರಾಸರಿ ಆಸ್ತಿ 3.75 ಕೋಟಿ ರೂ. ಆಗಿದ್ದು, ಈ ಪೈಕಿ ಶೇ.23 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಶೇ.18ರಷ್ಟು ಮಂದಿಯ ಮೇಲೆ ಗಂಭೀರವಾದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ.
ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ 60 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಪರಿಶೀಲಿಸಿದ ಮಣಿಪುರ ಎಲೆಕ್ಷನ್ ವಾಚ್ ಆ್ಯಂಡ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇದನ್ನು ಬಹಿರಂಗಪಡಿಸಿದೆ.
ಈ ಬಾರಿ ಬಿಜೆಪಿ 32, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 7, ಜನತಾ ದಳ (ಯುನೈಟೆಡ್) 6, ಕಾಂಗ್ರೆಸ್ 5, ನಾಗಾ ಪೀಪಲ್ಸ್ ಫ್ರಂಟ್ 5, ಪಕ್ಷೇತರ ಅಭ್ಯರ್ಥಿಗಳು 3 ಮತ್ತು ಕುಕ್ಕಿ ಪೀಪಲ್ಸ್ ಅಲೈಯನ್ಸ್ 2 ಸ್ಥಾನಗಳನ್ನು ಪಡೆದಿದೆ.