ರಾಜಧಾನಿ ದೆಹಲಿಯಲ್ಲಿ ಪ್ರತಿವರ್ಷ ಬಂಧಿತರಾಗುತ್ತಿರುವವರೆಷ್ಟು ಗೊತ್ತೇ?

Prasthutha|

ಹೊಸದಿಲ್ಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಪ್ರತಿ ವರ್ಷ ವಿವಿಧ ಅಪರಾಧಗಳಿಗಾಗಿ ಎರಡು ಲಕ್ಷಕ್ಕೂ ಅಧಿಕ ಮಂದಿ ಬಂಧಿತರಾಗುತ್ತಿದ್ದಾರೆ ಎಂದು ಪೊಲೀಸ್ ವರದಿಯೊಂದು ತಿಳಿಸಿದೆ.

- Advertisement -

ಬಂಧಿತರಾಗುತ್ತಿರುವ 85% ಮಂದಿ ಹೊಸದಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರು ಎಂದು ಅಂದಾಜಿಸಲಾಗಿದೆ.
ಕಮ್ಯೂನಿಟಿ ಪೊಲೀಸ್ ಕಾರ್ಯಕ್ರಮ ‘ಉನ್ನತಿ’ಯಲ್ಲಿ ಮಾತನಾಡುತ್ತಾ ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನಾ ಅವರು ಅಪರಾಧ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಅಪರಾಧದಲ್ಲಿ ತೊಡಗಿರುವವರನ್ನು ಮತ್ತೆ ಮುಖ್ಯವಾಹಿನಿಗೆ ತರುವುದು ‘ಉನ್ನತಿ’ಯ ಮುಖ್ಯ ಗುರಿಯಾಗಿದೆ.

“ಮೊದಲ ಬಾರಿ ಅಪರಾಧ ಮಾಡಿ ಸಿಕ್ಕಿಬಿದ್ದವರನ್ನು ಮುಖ್ಯ ವಾಹಿನಿಗೆ ತರುವುದು ಪೊಲೀಸರ ಜವಾಬ್ಧಾರಿಯಾಗಿದೆ. ಇದರಿಂದ ಸಮುದಾಯದಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯಬಹುದು. ನಾವು ಕಾನೂನು ಮತ್ತು ಸುವ್ಯವಸ್ಥೆಗಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ” ಎಂದು ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನಾ ತಿಳಿಸಿದ್ದಾರೆ.

Join Whatsapp