ನಮ್ಮ ಸೈನಿಕರು ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ ಟಿ 20 ಪಂದ್ಯಾಟ ಖೇದಕರ: ಸಂಸದ ಅಸದುದ್ದೀನ್ ಉವೈಸಿ

Prasthutha|

ಹೈದರಾಬಾದ್: ಭಾರತದ ಗಡಿಯಲ್ಲಿ ದೇಶದ ಸೈನಿಕರು ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ ಟಿ 20 ಕ್ರಿಕೆಟ್ ಪಂದ್ಯಾಟವನ್ನು ಆಡುತ್ತಿರುವುದು ಖೇದಕರ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ವಿವಿಧ ಕಾರ್ಯಾಚರಣೆಗಳಲ್ಲಿ ಹತರಾದ ಸೇನಾ ಸಿಬ್ಬಂದಿಯ ಬಗ್ಗೆ ಪ್ರತಿಕ್ರಿಯಿಸಿದ ಅಸದುದ್ದೀನ್ ಉವೈಸಿ, “ನಮ್ಮ ಒಂಬತ್ತು ಸೈನಿಕರು ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ ಮತ್ತು ಭಾರತವು ಅಕ್ಟೋಬರ್ 24 ರಂದು ಪಾಕಿಸ್ತಾನದೊಂದಿಗೆ ಟಿ 20 ಪಂದ್ಯವನ್ನು ಆಡಲಿದೆ ಎಂದು ವಿಷಾದಿಸಿದರು.

ನಮ್ಮ ಸೈನಿಕರು ದೇಶದ ಗಡಿಯಲ್ಲಿ ಸಾಯುತ್ತಿದ್ದಾಗ ಭಾರತ ಟಿ 20 ಪಂದ್ಯಾಟಕ್ಕೆ ಸಜ್ಜುಗೊಳ್ಳುತ್ತಿದೆ. ಪಾಕಿಸ್ತಾನವು ಭಾರತದ ಜನರ ಜೀವದೊಂದಿಗೆ ಪ್ರತಿದಿನ 20 – 20 ಆಡುತ್ತಿದೆ ಎಂದು ಉವೈಸಿ ಗುಡುಗಿದರು.

- Advertisement -

ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭಯೋತ್ಪಾದಕರು ನಡೆಸಿದ ಎರಡು ದಾಳಿಗಳಲ್ಲಿ ಬಿಹಾರದ ಬೀದಿ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸುತ್ತಾ ಈ ಮೇಲಿನಂತೆ ಹೇಳಿಕೆ ನೀಡಿದರು.



Join Whatsapp