ಮೋದಿ ನಾಯಕತ್ವವನ್ನು ಬೇರೆ ದೇಶಗಳೂ ಗುರುತಿಸುತ್ತಿವೆ: ದೇವೇಗೌಡ

Prasthutha|

ಬೆಂಗಳೂರು:ಮೋದಿ ನಾಯಕತ್ವವನ್ನು ಭಾರತ ಮಾತ್ರವಲ್ಲ, ಬೇರೆ ದೇಶಗಳೂ ಗುರುತಿಸುತ್ತಿವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

- Advertisement -

ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜೆಡಿಎಸ್‌ ಹಿರಿಯ ನಾಯಕ, ಮೋದಿ ಅವರು ವಾಜಪೇಯಿಗಿಂತ ಭಿನ್ನ ವ್ಯಕ್ತಿತ್ವದವರು. ವಾಯಪೇಯಿ ನಾಯಕತ್ವದಲ್ಲಿ ಬಿಜೆಪಿಯು ಲೋಕಸಭೆಯಲ್ಲಿ 180ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರಲಿಲ್ಲ. ಆದರೆ, ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನ ಜಯಿಸಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು 350ಕ್ಕಿಂತ ಹೆಚ್ಚು ಕಡೆ ಗೆಲುವು ಸಾಧಿಸಿದ್ದಾರೆ. ಇದೀಗ ಮೋದಿ ಅವರು, ಎನ್‌ಡಿಎ ಮೈತ್ರಿಕೂಟವು 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಗುರಿ ಹಾಕಿಕೊಂಡಿದ್ದಾರೆ ಎಂದಿದ್ದಾರೆ.

ಭಾರತದಲ್ಲಿ ಆಗಲಿ ಅಥವಾ ಹೊರಗೇ ಆಗಲಿ. ಮೋದಿಯವನ್ನು ಗುರುತಿಸುವಂತಹ ವಾತಾವರಣ ನಿರ್ಮಾಣವಾಗಿದೆ. ವಿರೋಧ ಪಕ್ಷಗಳ ನಾಯಕರು ಸ್ಪಷ್ಟವಾದ ನಿಲುವು ಹೊಂದಿಲ್ಲ. ಅವರು ಮೋದಿ ವಿರುದ್ಧ ಜನರ ಗಮನ ಸೆಳೆಯುವುದಕ್ಕಾಗಿ ಅಪ್ರಸ್ತುತ ವಿಚಾರಗಳನ್ನು ಮಾತನಾಡುತ್ತಾರೆ. ಆದರೆ, ಜನರು ಅವರನ್ನೆಲ್ಲ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ದೇವೇಗೌಡ ಟೀಕಿಸಿದ್ದಾರೆ

Join Whatsapp