545 ಪಿಎಸ್ ಐ ಹುದ್ದೆಗಳ ಮರುಪರೀಕ್ಷೆಗೆ ಆದೇಶ; ರದ್ದು ಪಡಿಸಲು ಆಗ್ರಹಿಸಿ ನೂರಾರು ಅಭ್ಯರ್ಥಿಗಳಿಂದ ಧರಣಿ ಸತ್ಯಾಗ್ರಹ

Prasthutha|

ಬೆಂಗಳೂರು: ಸಮತಾ ಸೈನಿಕ ದಳವತಿಯಿಂದ 545 ಪೋಲಿಸ್ ಸಬ್ ಇನ್ಸ್ ಸ್ಪಕ್ಟರ್ ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲು ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

- Advertisement -

ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಪಿ ಎಸ್ ಐ ಆಯ್ಕೆಯ ನೂರಾರು ಅಭ್ಯರ್ಥಿಗಳು  ಧರಣಿ ಸತ್ಯಾಗ್ರಹದಲ್ಲಿ ಹಾಜರಿದ್ದರು.

ಸಬ್ ಇನ್ಸ್ ಸ್ಪಕ್ಟರ್ ಪರೀಕ್ಷೆಯ ಎಲ್ಲ‌ ಪ್ರಕ್ರಿಯೆಗಳು ಮುಗಿದಿದ್ದು ಆದೇಶ ನೀಡುವುದು ಮಾತ್ರ ಬಾಕಿ ಇತ್ತು. ಆದರೆ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಲೋಪಗಳು ಕಂಡು ಬಂದ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಾಗಿದೆ. ತನಿಖೆ ಪ್ರಗತಿಯಲ್ಲಿರುವಾಗಲೇ ರಾಜ್ಯ ಸರ್ಕಾರ ತರಾತುರಿಯಲ್ಲಿ ಮರು ಪರೀಕ್ಷೆಯನ್ನು ಘೋಷಿಸಿದ್ದು ಸರಿಯಲ್ಲ, ಗೃಹ ಸಚಿವರು ಮರು ಪರೀಕ್ಷೆಗೆ ಆದೇಶಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಪಿ ಎಸ್ ಐ ಅಕಾಂಕ್ಷಿಗಳು ಹೇಳಿದರು.

- Advertisement -

ಆಯ್ಕೆಯಾಗಿರುವ ಅಭ್ಯರ್ಥಿಗಳು ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿದ್ದು, ಆಯ್ಕೆ ಪಟ್ಟಿ ಪ್ರಕಟಗೊಂಡು ನೇಮಕಾತಿಯ ವಿವಿಧ ಹಂತಗಳು ಮುಕ್ತಾಯವಾದ ನಂತರ ನಿರೀಕ್ಷೆಯಲ್ಲಿರುವ ಬಹುತೇಕರು ತಮ್ಮ ಸರ್ಕಾರಿ ಮತ್ತು ಖಾಸಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಡೋಲಾಯಮಾನ ಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.



Join Whatsapp