ಕಿತ್ತಳೆ ಹಣ್ಣು ಸ್ವಲ್ಪ ಹುಳಿಯಾದರೂ ಇದರಲ್ಲಿವೆ ಅನೇಕ ಔಷಧಿಯ ಗುಣಗಳು

Prasthutha|

ಸ್ವಲ್ಪ ಹುಳಿ ಎನಿಸಿದರೂ ಸಿಹಿಯಾದ ಹಣ್ಣು ಕಿತ್ತಳೆ. ಹೆಸ್ಪೆರೆಡಿಯಮ್ ಎಂಬ ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರಿದ ಈ ಕಿತ್ತಳೆಗೆ ಅನೇಕ ಕಾಯಿಲೆಗಳನ್ನು ಹೊಡೆದೋಡಿಸುವ ಶಕ್ತಿಯಿದೆ.

- Advertisement -


ಕಿತ್ತಳೆ ಹಣ್ಣಿನಲ್ಲಿ ಥಯಾಮಿನ್, ರಿಬೋಫ್ಲವಿನ್, ನಿಯಾಸಿನ್, ವಿಟಮಿನ್ ಬಿ -6, ಫೊಲೇಟ್, ಪ್ಯಾಂಟೊಥೆನಿಕ್ ಆಮ್ಲ, ರಂಜಕ, ಮೆಗ್ನೀಶಿಯಮ್, ಮ್ಯಾಂಗನೀಸ್, ಸೆಲೆನಿಯಮ್ ಮತ್ತು ತಾಮ್ರ ಇರುತ್ತದೆ. ಅದರಲ್ಲೂ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಕಿತ್ತಳೆ ಹಣ್ಣುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


ಚಿಕ್ಕ ವಯಸ್ಸಿಗೆ ವಯಸ್ಸಾದವರಂತೆ ಕಾಣುತ್ತಿದ್ದರೆ ಅಥವಾ ಚರ್ಮದ ಯಾವುದೇ ಸಮಸ್ಯೆಗಳಿದ್ದರೆ ಕಿತ್ತಳೆ ಸೇವಿಸಿ. ಕಿತ್ತಳೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು, ನಿಮಗೆ ವಯಸ್ಸಾಗಿದ್ದರೆ ಅಥವಾ ವಯಸ್ಸಾದವರಂತೆ ಕಾಣುತ್ತಿದ್ದರೆ ಅದು ನೀವಿನ್ನು ಚಿಕ್ಕವರಂತೆ ಕಾಣುವಂತೆ ಮಾಡುತ್ತದೆ. ಜೊತೆಗೆ ಚರ್ಮದ ಹೊಳಪಿಗಾಗಿಯೂ ನೀವು ಈ ಹಣ್ಣನ್ನು ಸೇವಿಸಬಹುದು.

- Advertisement -


ನಾವು ವಯಸ್ಸಾದಂತೆ ನಮ್ಮ ಕಣ್ಣುಗಳು ಸಹ ಹಾನಿಗೊಳಗಾಗುತ್ತವೆ. ಆದರೆ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತವೆ. ಆದ್ದರಿಂದ ದೃಷ್ಟಿ ಚೆನ್ನಾಗಿರ ಬೇಕೆಂದು ಬಯಸುವವರು ಪ್ರತಿದಿನ ಕಿತ್ತಳೆ ತಿನ್ನಿರಿ.


ಹೆಚ್ಚಿನ ಜನರು ಹೃದ್ರೋಗದಿಂದ ಬಳಲುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಅನಾರೋಗ್ಯಕರ ಜೀವನಶೈಲಿ ಮತ್ತು ಜಂಕ್ ಫುಡ್ ಸೇವನೆ. ಇಂತಹ ಆಹಾರ ಸೇವೆನೆಯಿಂದ ಅಪಧಮನಿ ನಿರ್ಬಂಧಿಸ ಲ್ಪಡುತ್ತದೆ. ಆದರೆ ಕಿತ್ತಳೆ ಹಸ್ಪೆರಿಡಿನ್ ನಂತಹ ಫ್ಲೇವೊನೈಡ್ ಗಳನ್ನು ಹೊಂದಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ, ಅಪಧಮನಿಯನ್ನು ನಿರ್ಬಂಧಿಸದಂತೆ ತಡೆಯುತ್ತದೆ. ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.


ಕಿತ್ತಳೆ ಹಣ್ಣಿನಲ್ಲಿರುವ ಫೋಲೇಟ್ ಮತ್ತು ಫೋಲಿಕ್ ಆಮ್ಲವು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಾಸ್ತವವಾಗಿ ಇದರಲ್ಲಿರುವ ಪೋಷಕಾಂಶಗಳು ಗರ್ಭಿಣಿ ಮಹಿಳೆಯರಿಗೆ ಆರೋಗ್ಯಕರ. ಏಕೆಂದರೆ ಇದು ಮಗುವಿಗೆ ನರ ವೈಜ್ಞಾನಿಕ ಕಾಯಿಲೆ ಬರದಂತೆ ತಡೆಯುತ್ತದೆ.



Join Whatsapp