ನಕಲಿ ಪೆನ್ ಡ್ರೈವ್ ನಂತರ ನಕಲಿ ಪತ್ರದ ಮೊರೆ ಹೋದ ವಿಪಕ್ಷದ ಬೃಹಸ್ಪತಿಗಳು: ಕಾಂಗ್ರೆಸ್

Prasthutha|

ಬೆಂಗಳೂರು: ನಕಲಿ ಪೆನ್ ಡ್ರೈವ್ ಆಯ್ತು, ಈಗ ನಕಲಿ ಪತ್ರದ ಮೊರೆ ಹೋಗಿದ್ದಾರೆ ವಿರೋಧ ಪಕ್ಷದ ಬೃಹಸ್ಪತಿಗಳು ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement -

ತನ್ನ ವಿರುದ್ಧ ಅಧಿಕಾರಿಗಳು ರಾಜ್ಯಪಾಲರಿಗೆ ನೀಡಿದ್ದಾರೆ ಎನ್ನಲಾಗುವ ಪತ್ರ ನಕಲಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಘಟಕ ಈ ಟ್ವೀಟ್ ಮಾಡಿದೆ.

“ನಕಲಿ ಪೆನ್ ಡ್ರೈವ್ ಆಯ್ತು, ಈಗ ನಕಲಿ ಪತ್ರದ ಮೊರೆ ಹೋಗಿದ್ದಾರೆ ವಿರೋಧ ಪಕ್ಷದ ಬೃಹಸ್ಪತಿಗಳು, ಫೇಕ್ ಫ್ಯಾಕ್ಟರಿಯ ಮಾಲೀಕರು ಮೊದಲು ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತರಾಗಿದ್ದರು, ಈಗ ಸರ್ಕಾರಿ ವ್ಯವಸ್ಥೆ, ರಾಜ್ಯಪಾಲರ ಕಚೇರಿಗೂ ತಮ್ಮ ನಕಲಿ ಜಾಲ ವಿಸ್ತರಿಸಿದ್ದಾರೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

- Advertisement -

“ಕೃಷಿ ಸಚಿವರ ವಿರುದ್ಧ ಅಧಿಕಾರಿಗಳು ಲಂಚದ ಆರೋಪ ಹೊರಿಸಿ ರಾಜ್ಯಪಾಲರಿಗೆ ಬರೆದಿರುವ ಪತ್ರವೇ ನಕಲಿ. ಪತ್ರದಲ್ಲಿ ಹೆಸರಿಸಿರುವ ಅಧಿಕಾರಿಗಳ ಸಹಿಯನ್ನು ನಕಲಿ ಮಾಡಲಾಗಿದೆ, ನಕಲಿ ವಿಳಾಸವನ್ನು ನೀಡಲಾಗಿದೆ, ಈ ವಿಚಾರವನ್ನು ಆ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ” ಎಂದು ಕಾಂಗ್ರೆಸ್ ಹೇಳಿದೆ.

“ರಾಜ್ಯದಲ್ಲಿ ನಕಲಿ ಜಾಲವು ರಾಜ್ಯಪಾಲರ ಕಚೇರಿಯನ್ನೇ ಯಾಮಾರಿಸುವಷ್ಟರ ಮಟ್ಟಿಗೆ ಬೆಳೆದಿದೆ, ನಮ್ಮ ಸರ್ಕಾರ ನಕಲಿ ಜಾಲವನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ. ರಾಜ್ಯಪಾಲರಿಗೆ ಬರೆದ ಪತ್ರವು ಸಂಪೂರ್ಣ ನಕಲಿ ಎನ್ನುವುದು ತಿಳಿದುಬಂದಿದ್ದು ಇದರ ವಿರುದ್ಧ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಇದರ ತನಿಖೆ ನಡೆಸಿ ಇದರಲ್ಲಿ ಅದೆಷ್ಟೇ ದೊಡ್ಡವರ ಕೈವಾಡವಿದ್ದರೂ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದು ನಿಶ್ಚಿತ” ಎಂದು ಟ್ವೀಟ್ ಮಾಡಿದೆ.

Join Whatsapp