ಮಹಾಘಟಬಂಧನ್ | ಜೆಡಿಎಸ್ ಗೆ ಆಹ್ವಾನ ನೀಡದ ವಿಪಕ್ಷಗಳು: ಕುಮಾರಸ್ವಾಮಿ ಹೇಳಿದ್ದೇನು?

Prasthutha|

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಒಗ್ಗಟ್ಟಾಗಿದ್ದು, ಈ ಸಂಬಂಧ ತಂತ್ರಗಳನ್ನು ರೂಪಿಸಲು ಇಂದಿನಿಂದ ಎರಡು ದಿನಗಳ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿವೆ. ಆದ್ರೆ, ಈ ಸಭೆಗೆ ಜೆಡಿಎಸ್ ಗೆ ಆಹ್ವಾನ ಕೊಟ್ಟಿಲ್ಲ. ಇನ್ನು ಈ ಬಗ್ಗೆ ಸ್ವತಃ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಮಹಾಘಟಬಂಧನ್ ನಮ್ಮ ಪಕ್ಷವನ್ನು ಲೆಕ್ಕಕ್ಕೇ ಇಟ್ಟಿಲ್ಲ. ಜೆಡಿಎಸ್ ಮುಳುಗಿಹೋಗಿದೆ ಎಂಬ ಭ್ರಮೆಯಲ್ಲಿ ಮಹಾಘಟಬಂಧನ್ ಇದೆ. ನಮ್ಮ ಪಕ್ಷಕ್ಕೆ ಆಹ್ವಾನ ಕೊಟ್ಟರೂ ಕೊಡದಿದ್ದರೂ ತಲೆಕೆಡಿಸಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.

- Advertisement -


ಬೆಂಗಳೂರಿನಲ್ಲಿ ಇಂದು (ಜುಲೈ 17) ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಪಾಪ ಅವರು ನಮ್ಮ ಪಕ್ಷವನ್ನು ಲೆಕ್ಕಕ್ಕೆ ಇಟ್ಟಿಲ್ಲ. ಜೆಡಿಎಸ್ ಮುಳುಗಿಹೋಗಿದೆ ಅನ್ನೋ ಭ್ರಮೆಯಲ್ಲಿ ಮಹಾಘಟಬಂದನ್ ವ್ಯವಸ್ಥಾಪಕರು ಇದ್ದಾರೆ. ಆಹ್ವಾನ ಕೊಟ್ಟರು,ಇಲ್ಲವೋ ಎನ್ನುವುದಕ್ಕೆ ತಲೆ ಕೂಡ ಕೆಡಿಸಿಕೊಂಡಿಲ್ಲ. ಇವರಿಗೆ ರೈತರ ಸಾವು ಕಾಣಿಸುತ್ತಿಲ್ಲ. ಇಂದಿನವರೆಗೂ ಆತ್ಮಹತ್ಯೆಗೆ ಒಳಗಾಗಬೇಡಿ ಎಂದು ಸಂದೇಶ ಸರ್ಕಾರ ನೀಡಿಲ್ಲ. ಇದು ಬೇಕಾಗಿಲ್ಲ ಎಂದು ಪರೋಕ್ಷವಾಗಿ ಮಹಾಘಟಬಂದನ್ ಸಭೆ ಬಗ್ಗೆ ಟೀಕಿಸಿದರು.

ಇನ್ನು ಇದೇ ವೇಳೆ ಎನ್ ಡಿಎ ಸಭೆಯಲ್ಲಿ ಭಾಗಿಯಾಗುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಮಗೆ ಎಲ್ಲೂ ಕೂಡ ಆಹ್ವಾನ ಇಲ್ಲ. ಮುಂದೆ ನೋಡೋಣ. ನನ್ನ ಪಕ್ಷ ಸಂಘಟನೆ ಏನಿದೆ, ನಾಡಿನ ಸಮಸ್ಯೆ ಏನಿದೆ ಅದನ್ನ ನೋಡುತ್ತಿದ್ದೇನೆ ಎಂದರು.



Join Whatsapp