ವಿಪಕ್ಷ ನಾಯಕ ಅಶೋಕ್‌ಗೆ ಅವರ ಪಕ್ಷದಲ್ಲೇ ಬೆಲೆಯಿಲ್ಲ: ಈಶ್ವರ ಖಂಡ್ರೆ

Prasthutha|

ಬೀದರ್‌: ಕೊನೆಗೂ ಬಿಜೆಪಿಯಲ್ಲಿ ವಿಪಕ್ಷ ನಾಯಕ ಆಯ್ಕೆಯಾಗಿದ್ದು, ಹಾಗೆ ಆಯ್ಕೆಯಾದ ಆರ್‌. ಅಶೋಕ್‌ಗೆ ಅವರ ಪಕ್ಷದಲ್ಲೇ ಬೆಲೆಯಿಲ್ಲ. ಅವರ ವಿರುದ್ಧ ಅಪಸ್ವರ ಎದ್ದಿದೆ. ಅವರ ಪಕ್ಷದವರಿಗೆ ಅವರನ್ನು ಇಟ್ಕೊಳ್ಳೋಕೆ ಆಗ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಅವರ ಮಾತನಾಡಿದರು.

- Advertisement -

ಈ ಹಿಂದೆ ಅವರ ಅಧಿಕಾರ ಇದ್ದಾಗ 100 ಕೋಟಿ ರೂ.‌ ಕೊಟ್ಟು ಮಂತ್ರಿ ಆಗಬೇಕಿತ್ತು. ಸಿಎಂ ಆಗೋಕೆ 2500 ಕೋಟಿ ಕೋಡಬೇಕಾಗಿತ್ತು ಅನ್ನುವಂಥ ಮಾತನ್ನ ಅವರೇ ಹೇಳಿದ್ರು. ಹಾಗಿರುವಾಗ ಬೇರೆಯವರ ತಟ್ಟೆಯಲ್ಲಿ ಏನು ಬಿದ್ದಿದೆ ಎಂದು ನೋಡೋ ಅವಶ್ಯಕತೆ ಇಲ್ಲಾ ಎಂದು ಸುದ್ದಿಗಸರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಆರ್‌ ಪಾಟೀಲ್‌ ರಾಜೀನಾಮೆ ಪತ್ರ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖಂಡ್ರೆ, ಬಿಆರ್‌ ಪಾಟೀಲ್‌ ಅತ್ಯಂತ ಹಿರಿಯ ನಾಯಕರಿದ್ದಾರೆ. ಸಿದ್ದರಾಮಯ್ಯ ಆಪ್ತ ಸ್ನೇಹಿತರೂ, ಕಾಂಗ್ರೆಸ್‌ನ ಕಟ್ಟಾಳೂ ಹೌದು. ಅವರಿಗೂ ಅನಿಸಿಕೆಗಳು ಇರ್ತಾವೆ, ವರಿಷ್ಠರು ಅವುಗಳನ್ನು ಸರಿಪಡಿಸ್ತಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು.



Join Whatsapp