ರಷ್ಯಾ ಅಧ್ಯಕ್ಷರ ಕಡು ವಿರೋಧಿ, ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಜೈಲಲ್ಲಿ ಮೃತ್ಯು

Prasthutha|

ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಡು ವಿರೋಧಿ, ಅವರ ಆಡಳಿತದಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದ ಹಾಗೂ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ (47) ಜೈಲಿನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

- Advertisement -

ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದಾಗ ಅವರು ಅನಾರೋಗ್ಯಕ್ಕೆ ತುತ್ತಾಗಿ ಪ್ರಜ್ಞೆ ಕಳೆದುಕೊಂಡ ಅಲೆಕ್ಸಿಯವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಗಿತ್ತು.ಆದರೆ, ಅಷ್ಟು ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ರಷ್ಯಾದ ಕಾರಾಗೃಹ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.

ವಿಧ್ವಂಸಕ ಕೃತ್ಯದ ಆರೋಪದಲ್ಲಿ 19 ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದ ನವಾಲ್ನಿ ಅವರನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ವ್ಲಾದಿಮಿರ್ ಪ್ರಾಂತ್ಯದಲ್ಲಿರುವ ರಷ್ಯಾ ಕೇಂದ್ರೀಯ ಕಾರಾಗೃಹದಿಂದ ಭಾರಿ ಬಿಗಿ ಭದ್ರತೆ ಇರುವ ಕಾರಾಗೃಹವೊಂದಕ್ಕೆ ಸ್ಥಳಾಂತರಿಸಲಾಗಿತ್ತು.

- Advertisement -

ಕಳೆದ ಡಿಸೆಂಬರ್‌ನಲ್ಲಿ ಮಧ್ಯ ರಷ್ಯಾದ ವ್ಲಾಡಿಮಿರ್ ಪ್ರದೇಶದ ಜೈಲಿನಿಂದ ಮಾಸ್ಕೋದಿಂದ ಈಶಾನ್ಯಕ್ಕೆ 1,900 ಕಿಲೋಮೀಟರ್ ದೂರದಲ್ಲಿರುವ ಖಾರ್ಪ್ ಪಟ್ಟಣದ ಪೋಲಾರ್ ವುಲ್ಫ್” ಎಂಬ ಅಡ್ಡ ಹೆಸರಿರುವ “ವಿಶೇಷ ಆಡಳಿತ” ಪೆನಾಲ್ ಕಾಲನಿ- IK-3ಗೆ ಸ್ಥಳಾಂತರಿಸಲಾಯಿತು.

ಇದು ರಷ್ಯಾದಲ್ಲಿ ಅತ್ಯಂತ ಕಠಿಣವಾದ ಜೈಲು ಎಂದು ಪರಿಗಣಿಸಲಾಗಿದೆ, ಅಲ್ಲಿ ಹೆಚ್ಚಿನ ಬಂಧಿತರು ಗಂಭೀರ ಅಪರಾಧಗಳಿಗೆ ಶಿಕ್ಷೆಗೊಳಗಾದವರು.



Join Whatsapp