ಚಾಮರಾಜನಗರ ನಗರಸಭೆ: ಬಹುಮತ ಇದ್ದರೂ ಕಾಂಗ್ರೆಸ್-SDPI ಮೈತ್ರಿಕೂಟಕ್ಕೆ ಸೋಲು!

Prasthutha|

►ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಕೈ ಕೊಟ್ಟ ನಾಲ್ವರು ಕಾಂಗ್ರೆಸ್ ಸದಸ್ಯರು

- Advertisement -


ಚಾಮರಾಜನಗರ: ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್- ಎಸ್ ಡಿಪಿಐ ಮೈತ್ರಿಕೂಟಕ್ಕೆ ಬಹುಮತ ಇದ್ದರೂ ಆಪರೇಷನ್ ಕಮಲಕ್ಕೆ ಒಳಗಾದ ಮೂವರು ಕಾಂಗ್ರೆಸ್ ಸದಸ್ಯರು ಮತದಾನಕ್ಕೆ ಗೈರು ಹಾಜರಾಗಿದ್ದರಿಂದ ಮತ್ತು ಓರ್ವ ಕಾಂಗ್ರೆಸ್ ಕೌನ್ಸಿಲರ್ ಬಿಜೆಪಿ ಪರ ಅಡ್ಡಮತದಾನ ಮಾಡಿದ್ದರಿಂದ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಚಾಮರಾಜನಗರ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿಯ ಸುರೇಶ್ ನಾಯ್ಕ್ಕ ಹಾಗೂ ಉಪಾಧ್ಯಕ್ಷರಾಗಿ ಮಮತಾ ಸುಬ್ರಮಣಿಯನ್ ಆಯ್ಕೆಯಾಗಿದ್ದಾರೆ.

ಬಿಜೆಪಿಗೆ 15 ಮತಗಳು ಬಂದರೆ ಕಾಂಗ್ರೆಸ್-ಎಸ್ ಡಿಪಿಐ ಮೈತ್ರಿಕೂಟಕ್ಕೆ 14 ಮತಗಳು ದೊರೆತವು. ಕಾಂಗ್ರೆಸ್ ಶಾಸಕರು, ಸಂಸದರು ಮತ ಚಲಾಯಿಸಿದರೂ ಕಾಂಗ್ರೆಸ್ ಗೆ ಬಹುಮತ ದೊರಕದೆ ಮುಖಭಂಗ ಅನುಭವಿಸಿದೆ.

- Advertisement -

ಮೂವರು ಕಾಂಗ್ರೆಸ್ ಸದಸ್ಯರಾದ ಆರ್ ಪಿ ನಂಜುಂಡಸ್ವಾಮಿ, ನೀಲಮ್ಮ, ಭಾಗ್ಯಮ್ಮ ಸಭೆಗೆ ಹಾಜರಾಗಲಿಲ್ಲ. ಕಾಂಗ್ರೆಸ್ ಸದಸ್ಯೆ ಚಂದ್ರಕಲಾ ಬಿಜೆಪಿ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.

ಚಾಮರಾಜನಗರ ನಗರಸಭೆಯಲ್ಲಿ ಒಟ್ಟು 31 ಸ್ಥಾನಗಳಿವೆ. ಬಿಜೆಪಿ 15, ಕಾಂಗ್ರೆಸ್ 8, ಎಸ್ ಡಿಪಿಐ 6, ಬಿಎಸ್ ಪಿ 1, ಪಕ್ಷೇತರ 1 ಸದಸ್ಯ ಬಲವಿದೆ. ಇದರಲ್ಲಿ ಬಿಎಸ್ ಪಿ ಸದಸ್ಯ ಅನಾರೋಗ್ಯದಿಂದಾಗಿ ಸತತವಾಗಿ ಕೌನ್ಸಿಲ್ ಸಭೆಗೆ ಗೈರು ಹಾಜರಾದ್ದರಿಂದ ಅವರ ಸದಸ್ಯತ್ವ ಅನರ್ಹಗೊಂಡಿದ್ದು ಸದ್ಯ ಸದಸ್ಯರ ಬಲ 30ಕ್ಕೆ ಕುಸಿದಿದೆ. ಕಾಂಗ್ರೆಸ್ ಎಸ್ಡಿಪಿಐ ಮೈತ್ರಿಯಲ್ಲಿ 17 ಮತಗಳು ಇದ್ದವು. ಕಾಂಗ್ರೆಸ್ 8, ಎಸ್ ಡಿಪಿಐ 6, ಪಕ್ಷೇತರ 1, ಶಾಸಕ, ಸಂಸದರ ಮತಗಳು ಸೇರಿ 17 ಮತಗಳು ಇತ್ತು. ಆದರೆ ಕಾಂಗ್ರೆಸ್ ನ ಮೂರು ಮಂದಿ ಸದಸ್ಯರು ಮತದಾನಕ್ಕೆ ಗೈರಾಗಿದ್ದು, ಓರ್ವ ಸದಸ್ಯ ಬಿಜೆಪಿ ಪರ ಅಡ್ಡ ಮತದಾನ ಮಾಡಿದ್ದಾರೆ. ಬಿಜೆಪಿಯ ಸದಸ್ಯರೊಬ್ಬರು ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ.

ಬಿಜೆಪಿ 15 ಮತ ಪಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆ ಗಿಟ್ಟಿಸಿಕೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಆರ್ ಎಂ ರಾಜಪ್ಪ, ಬಿಜೆಪಿಯಿಂದ ಸುರೇಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಎಸ್ ಡಿಪಿಐ ಸದಸ್ಯ ಅಬ್ರಾರ್ ಅಹಮದ್ ಮತ್ತು ಬಿಜೆಪಿಯಿಂದ ಎಸ್.‌ಮಮತಾ ನಾಮಪತ್ರ ಸಲ್ಲಿಸಿದ್ದರು.



Join Whatsapp