ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಸಂಘದ ಉದ್ಘಾಟನಾ ಸಮಾರಂಭವು ಗುರುವಾರ ನೆರವೇರಿತು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಯರಾಜ್ ಅಮಿನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಯಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ಆರ್ ಶ್ರೀಧರ್, ವಿಭಾಗದ ಉಪಾಧ್ಯಕ್ಷರಾದ ಮಿಶ್ರಿಯಾ ಮತ್ತು ಕಾರ್ಯದರ್ಶಿಯಾದ ಪ್ರಜ್ವಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಪ್ರೊ.ಕೆ.ಆರ್ ಶ್ರೀಧರ್, ಪರಿಸರ ಸಂರಕ್ಷಣೆ ಮತ್ತು ಅದರ ಸವಾಲುಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರೊ.ಜಯರಾಜ್ ಅಮಿನ್ ಮಾತನಾಡಿದರು. ಅದರಂತೆ ದ್ವಿತೀಯ ಎಂ.ಎ ವಿದ್ಯಾರ್ಥಿಯಾದ ಪ್ರಜ್ವಲ್ ರ ಪ್ರಾಸ್ತಾವಿಕ ನುಡಿಯನ್ನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರು, ವಿಧ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಥಮ ಎಂ.ಎ ವಿದ್ಯಾರ್ಥಿನಿ ಭೂಮಿಕಾ ಸ್ವಾಗತ ಭಾಷಣ ಮಾಡಿದರು. ದ್ವಿತೀಯ ಎಂ.ಎ ವಿದ್ಯಾರ್ಥಿ ಅಲ್ತಾಫ಼್ ಮದ್ದಡ್ಕ ವಂದಿಸಿದರು. ದ್ವಿತೀಯ ಎಂ.ಎ ವಿದ್ಯಾರ್ಥಿನಿ ಕಾವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.