ಕಾವೇರಿ ಕಿಚ್ಚು: KRS ಜಲಾಶಯದ ಬಳಿ ನೀರಿಗಿಳಿದು ರೈತರ ಪ್ರತಿಭಟನೆ

Prasthutha|

ಮಂಡ್ಯ: ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಅದರಂತೆ ಸರ್ಕಾರ ಹೆಚ್ಚುವರಿ ನೀರನ್ನು ಹರಿಸುತ್ತಿದ್ದು, ಈ ಹಿನ್ನಲೆ ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ರೈತಸಂಘದ ಕಾರ್ಯಕರ್ತರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್​ಎಸ್ ಜಲಾಶಯದ ಬಳಿ ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.

- Advertisement -

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ‘ಮಂಡ್ಯ ಎಂಬ ಬೆಂಕಿ ಚೆಂಡನ್ನು ವಿಧಾನಸೌಧಕ್ಕೆ ಎಸೆಯುತ್ತೇವೆ. ಮಂಡ್ಯ ಜಿಲ್ಲೆ ಬೆಂಕಿ ಚೆಂಡು ಇದ್ದಂತೆ. ಚೆಂಡು ಎಸೆದ್ರೆ ಎಲ್ಲರೂ ಉರಿದುಹೋಗ್ತೀರಿ. ಕದ್ದು ನೀರು ಬಿಟ್ಟರೆ ನಿಮ್ಮನ್ನು ಕಳ್ಳ ಸರ್ಕಾರ ಎನ್ನಬೇಕಾಗುತ್ತೆ. ರಾತ್ರಿ 9 ಗಂಟೆಯ ನಂತರ ಕದ್ದು ನೀರು ಬಿಡುತ್ತೀರಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Join Whatsapp