5 ವರ್ಷ ಸಿಎಂ ಆಗಿ ಮುಂದುವರಿಯೋ ವಿಚಾರ ಗೊತ್ತಿರೋದು ಸಿದ್ದರಾಮಯ್ಯ, ಡಿಸಿಎಂಗೆ ಮಾತ್ರ: ಪರಮೇಶ್ವರ್

Prasthutha|

ಬೆಂಗಳೂರು: 5 ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರ ಗೊತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾತ್ರ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸಿಎಂ ಆಗಿ 5 ವರ್ಷ ನಾನೇ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮಗೆ ಯಾರಿಗೂ ಗೊತ್ತಿಲ್ಲ ದೆಹಲಿಯಲ್ಲಿ ಸರ್ಕಾರ ರಚನೆ ಯಾದಾಗ ಏನೂ ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. ಅದು ಗೊತ್ತಿರೋದು ಸಿಎಂ ಹಾಗೂ ಡಿಸಿಎಂಗೆ ಮಾತ್ರ. ಅವರಿಗೆ ಮಾತ್ರ ಎಲ್ಲ ಗೊತ್ತಿರೋದು. ಆ ವಿಚಾರದಲ್ಲಿ ನಾವು ಹೇಳಿಕೆ ಕೊಡೋಕೆ ಸರಿ ಕಾಣಿಸಲ್ಲ. ಈ ಸಂದರ್ಭದಲ್ಲಿ ಪ್ರಧಾನಕಾರ್ಯದರ್ಶಿಗಳು ಬಂದು ಹೋಗಿದ್ದಾರೆ. ಬಹುಶಃ ಅವರಿಗೆ ಗೊತ್ತಿರುತ್ತೆ ಎಂದರು.

- Advertisement -

ಯಾವುದು ಸತ್ಯ ಯಾವುದು ಅಸತ್ಯ ಅಂತಾ ನಾನು ಜಡ್ಜ್ ಮಾಡೊಕ್ಕೆ ಆಗುತ್ತಾ?. ಅವರು ಹೇಳಿದ್ದಾರೆ ಏನೋ ಅರ್ಥ ಇರಬೇಕು. ನಾನು ವೈಯಕ್ತಿಕವಾಗಿ ಜಡ್ಜ್ಮೆಂಟ್ ಮಾಡೋಕ್ಕೆ ಆಗಲ್ಲ ಎಂದರು.



Join Whatsapp