‘ಟ್ರಿಲಿಯನ್’ ಸುಳ್ಳುಗಳನ್ನು ಹೇಳಲು ಬಿಜೆಪಿಗಷ್ಟೇ ಸಾಧ್ಯ: ಅಖಿಲೇಶ್ ಯಾದವ್

Prasthutha|

ಲಖನೌ: ಉತ್ತರ ಪ್ರದೇಶದ ಆರ್ಥಿಕತೆಯನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಒಂದು ಟ್ರಿಲಿಯನ್‌ ಗೆ ತಲುಪಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಅದು ಅಸಾಧ್ಯ. ಬಿಜೆಪಿಯವರಷ್ಟೇ ಇಂತಹ ‘ಟ್ರಿಲಿಯನ್‌’ ಸುಳ್ಳುಗಳನ್ನು ಹೇಳಬಲ್ಲರು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

- Advertisement -

ಸಾಮಾಜಿಕ ಮಾದ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಯಾದವ್‌, ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದ್ದಾರೆ.

ಹಿಂದಿಯಲ್ಲಿ ಮಾಡಿರುವ ಟ್ವೀಟ್‌ನಲ್ಲಿ, ‘ಒಂದು ಟ್ರಿಲಿಯನ್‌ ಸುಳ್ಳುಗಳನ್ನು ಹೇಳಲು ಬಿಜೆಪಿಗಷ್ಟೇ ಸಾದ್ಯ. ಅದನ್ನು ಬಿಟ್ಟು ಬೇರೇನೂ ಇಲ್ಲ’ ಎಂದಿದ್ದಾರೆ.

- Advertisement -

‘ರಾಜ್ಯದ ಆರ್ಥಿಕತೆಯು ಮುಂದಿನ ನಾಲ್ಕು ವರ್ಷಗಳಲ್ಲಿ ಒಂದು ಟ್ರಿಲಿಯನ್‌ ತಲುಪಲಿದೆ ಎಂಬ ಘೋಷವಾಕ್ಯವನ್ನು ಉತ್ತರ ಪ್ರದೇಶ ಬಿಜೆಪಿಯು ಮತ್ತೆ ಹರಿಬಿಟ್ಟಿದೆ. ಈಗಿನ ಬೆಳವಣಿಗೆ ದರದ ಪ್ರಕಾರ, ಅದು ಅಸಾಧ್ಯ. ಆ ಕಾರಣಕ್ಕಾಗಿಯೇ ಇದು ಅತಿದೊಡ್ಡ ಸುಳ್ಳು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಭ್ರಷ್ಟಾಚಾರವು ಸರ್ಕಾರದ ಖಜಾನೆಗೆ ಹೊಡೆತ ನೀಡಿದೆ. ಹೂಡಿಕೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ರೈತರು, ವರ್ತಕರು, ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ನಿರುದ್ಯೋಗವು ಬಡತನದ ಹೊಸ ಅಧ್ಯಾಯ ಬರೆಯುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಜನರ ಬಳಿ ಹಣವೇ ಇಲ್ಲದಿದ್ದರೆ, ಕೊಳ್ಳುವ ಶಕ್ತಿ ಎಲ್ಲಿಂದ ಬರುತ್ತದೆ? ಕೆಲಸಗಾರರೆಲ್ಲ ವಲಸೆ ಹೋಗುತ್ತಿರುವಾಗ, ಕಾರ್ಮಿಕ ಸಂಪನ್ಮೂಲ ಎಲ್ಲಿಂದ ಸೃಷ್ಟಿಸುವಿರಿ?’ ಎಂದು ಪ್ರಶ್ನಿಸಿದ್ದಾರೆ.



Join Whatsapp