ರಿಯಾದ್ ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಆನ್ ಲೈನ್ ಕ್ವಿಝ್: ವಿಜೇತರಿಗೆ ಬಹುಮಾನ ವಿತರಣೆ

Prasthutha|

ರಿಯಾದ್: ಇಂಡಿಯನ್ ಸೋಶಿಯಲ್ ಫೋರಮ್  ರಿಯಾದ್, ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಆನ್‌ ಲೈನ್ ಕ್ವಿಝ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ  ರಿಯಾದ್‌ ನ ಅಲ್-ಮಾಸ್ ಸಭಾಂಗಣದಲ್ಲಿ ನಡೆಸಲಾಯಿತು.

- Advertisement -

ಕಾರ್ಯಕ್ರಮವನ್ನು ಇಂಡಿಯನ್ ಫೋರಮ್ ಫಾರ್ ಎಜುಕೇಶನ್’ನ ಅಧ್ಯಕ್ಷ ಡಾ.ದಿಲ್ಷಾದ್ ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಸಂಧರ್ಭದಲ್ಲಿ ಇಂಥ ಕಾರ್ಯಕ್ರಮವು  ಜನರಿಗೆ ಓದಲು ಮತ್ತು ಕಲಿಯಲು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದರು.

ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಹಾರಿಸ್ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ  ಕ್ವಿಝ್ ಸ್ಪರ್ಧೆಯ ಎಲ್ಲಾ ವಿಜೇತರನ್ನು ಅಭಿನಂದಿಸಿ, ಭಾರತದ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಕಲಿಯಲು ಇಂತಹ ಸ್ಪರ್ಧೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಅವರು ಕರೆ ನೀಡಿದರು.

- Advertisement -

ಭಾರತದ ಪ್ರಸ್ತುತ ಆಡಳಿತವು ನೈಸರ್ಗಿಕ ಸಂಪನ್ಮೂಲಗಳನ್ನು, ಜನರ ಸಂಪತ್ತನ್ನು ಲೂಟಿ ಮಾಡುತ್ತಿದೆ.  ತನ್ನ ಸರ್ವಾಧಿಕಾರ ಧೋರಣೆಯಿಂದ ಇಡೀ ರಾಷ್ಟ್ರದ ಜನರನ್ನು ಗುಲಾಮರನ್ನಾಗಿ ಮಾಡುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಇಂದು ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ಸದ್ದಿಲದ್ದೇ ಇತಿಹಾಸದಿಂದ ಅಳಿಸುವ ಪ್ರಯತ್ನ ನಡೆಯುತ್ತಿದೆ. ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಣಿದ ವೀರರನ್ನು ನೆನೆಯಲು ಈ ಆನ್‌ ಲೈನ್ ಕ್ವಿಝ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆನ್‌ ಲೈನ್ ಕ್ವಿಝ್ ಸ್ಪರ್ಧೆಯು ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗಿತ್ತು. ಎಲ್ಲಾ ಪ್ರದೇಶಗಳ ಅನಿವಾಸಿ ಭಾರತೀಯರು ಈ ಕ್ವಿಝ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.

ತಮಿಳ್ ಬಿಸಿನೆಸ್ ಫೋರಮ್’ ನ ಕಾರ್ಯದರ್ಶಿ ಮಲಿಕ್ ಇಬ್ರಾಹಿಂ, ಇಂಡಿಯಾ ಫ್ರೆಟರ್ನಿಟಿ ಫೋರಮ್  ರಿಯಾದ್ ಇದರ ಪ್ರಧಾನ ಕಾರ್ಯದರ್ಶಿ ರಂಝುದ್ದೀನ್ ಅಬ್ದುಲ್ ವಹಾಬ್, ಇಂಡಿಯನ್ ಸೋಶಿಯಲ್ ಫೋರಮ್, ಕೇರಳ ರಾಜ್ಯ ಸಮಿತಿಯ ಅಧ್ಯಕ್ಷ  ಸೈದಲವಿ, ಬಿಹಾರ್ ಫೌಂಡೇಶನ್ ಸದಸ್ಯ ಅಬ್ದುಲ್ ಗಫ್ಫಾರ್ ಬಿಹಾರ, ಬಸ್ರೂರು ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ಹನೀಫ್ ಬಸ್ರೂರ್, ಇಂಡಿಯನ್ ಸೋಶಿಯಲ್ ಫೋರಮ್ ಉತ್ತರ ರಾಜ್ಯ ಸಮಿತಿಯ ಅಧ್ಯಕ್ಷ ಇಹ್ಸಾನ್ ಸಾಬ್,  ಸ್ಪರ್ಧೆಯ ವಿಜೇತರನ್ನು ಪ್ರೋತ್ಸಾಹಿಸಿ, ಇಂಡಿಯನ್ ಸೋಶಿಯಲ್ ಫೋರಮ್  ಸೌದಿ ಅರೇಬಿಯಾದಲ್ಲಿ ಭಾರತೀಯ ಸಮುದಾಯಕ್ಕಾಗಿ  ನಡೆಸುತ್ತಿರುವಂತಹ ಸಮಾಜ ಸೇವಾ ಕಾರ್ಯಗಳಿಗೆ ಶುಭ ಹಾರೈಸಿದರು.

ಸ್ಪರ್ಧೆಯಲ್ಲಿ  ದ್ವಿತೀಯ ಮತ್ತು ತೃತೀಯ ಸ್ಥಾನ ವನ್ನು ರಿಯಾದ್ ಪ್ರದೇಶದ ಶಾಝಿಯ ಇಕ್ಬಾಲ್ ಬಿಹಾರ ಮತ್ತು ಅಫೀಫಾ ಇಕ್ಬಾಲ್ ಬಿಹಾರ  ಕ್ರಮವಾಗಿ ಗೆದ್ದುಕೊಂಡರು, ವಿಜೇತರಿಗೆ  ವೇದಿಕೆಯಲ್ಲಿ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.

ಪ್ರದೇಶವಾರು ವಿಜೇತರಲ್ಲಿ ರಿಯಾದ್ ಪ್ರದೇಶದಿಂದ ಪ್ರಥಮ ಬಹುಮಾನವನ್ನು ಮುಹಮ್ಮದ್ ನೌಫಲ್ ಕರ್ನಾಟಕ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಕ್ರಮವಾಗಿ ರಹ್ಮತ್ ಖತೀಜಾ ತಮಿಳುನಾಡು ಮತ್ತು ಅಹಮದ್ ಅನ್ವರ್ ಕರ್ನಾಟಕ ಪಡೆದುಕೊಂಡರು

ಇಂಡಿಯನ್ ಸೋಶಿಯಲ್ ಫೋರಮ್  ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ಪೂಂಜಾಲಕಟ್ಟೆ ಸ್ವಾಗತಿಸಿ, ಇಂಡಿಯನ್ ಸೋಶಿಯಲ್ ಫೋರಮ್  ಸೆಂಟ್ರಲ್ ಕಮಿಟಿ ಸದಸ್ಯ ಮುಹಮ್ಮದ್  ಧನ್ಯವಾದಗಳನ್ನು ಸಲ್ಲಿಸಿದರು. ಇಂಡಿಯನ್ ಸೋಶಿಯಲ್ ಫೋರಮ್  ತಮಿಳುನಾಡು ರಾಜ್ಯ ಸಮಿತಿ ಅಧ್ಯಕ್ಷ ಫತ್ರುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

Join Whatsapp