ಬೆಂಗಳೂರು: ವಂಡರ್ಲಾ ವತಿಯಿಂದ “ವಿಶ್ವ ತಂದೆಯ ದಿನ”ದ ಪ್ರಯುಕ್ತವಾಗಿ ಇದೇ ಜೂನ್ 19ರಂದು ಮೂರು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಅನ್ನು ಉಚಿತವಾಗಿ ನೀಡುವ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ.
ವಂಡರ್ ಲಾ ಪ್ರತಿಯೊಂದು ವಿಶೇಷ ದಿನಗಳ ಸಂದರ್ಭದಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅದೇ ರೀತಿ, ಈ ಬಾರಿಯ ಅಪ್ಪಂದಿರ ದಿನವನ್ನು ವಂಡರ್ ಲಾ ಇನ್ನಷ್ಟು ಆತ್ಮೀಯತೆಗೊಳಿಸುವ ಪ್ರಯತ್ನ ನಡೆಸಿದೆ. ಅದರಂತೆ ಈ ಬಾರಿ ಅಪ್ಪಂದಿರ ದಿನದಂದು ಮೂರು ಟಿಕೆಟ್ ಖರೀದಿಸಿದರೆ ನಾಲ್ಕನೇಯ ಟಿಕೆಟ್ ನನ್ನು ಉಚಿತವಾಗಿ ಪಡೆಯಬಹುದು.
ಇನ್ನು 10 ನೇ ತರಗತಿ, ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೂ ವಿಶೇಷ ಕೊಡುಗೆ ನೀಡಲಾಗಿದೆ. ಅವರು ತಮ್ಮ ಹಾಲ್ ಟಿಕೆಟ್ ಗಳನ್ನು ತೋರಿಸುವ ಮೂಲಕ ಶೇ. 35ರಷ್ಟು ರಿಯಾಯಿತಿ ಪಡೆಯಬಹುದು. ಅಷ್ಟೆ ಅಲ್ಲದೆ, 22 ವರ್ಷ ಒಳಗಿನ ವಿದ್ಯಾರ್ಥಿಗಳಿಗೂ ಸಹ ತಮ್ಮ ಕಾಲೇಜು ಐಡಿ ತೋರಿಸುವ ಮೂಲಕ ಶೇ.20ರಷ್ಟು ರಿಯಾಯಿತಿ ಪಡೆಯಬಹುದು. ಟಿಕೆಟ್ ಬುಕ್ಕಿಂಗಾಗಿ https://bookings.wonderla.com/ ವೆಬ್ ಸೈಟ್ ಗೆ ಹಾಗೂ ಹೆಚ್ಚಿನ ಮಹಿತಿಗಾಗಿ www.wonderla.com ಭೇಟಿ ನೀಡಿ. ಅಥವಾ 080 37230333, 080 35073966 ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿಶ್ವ ಅಪ್ಪಂದಿರ ದಿನದಂದು ವಂಡರ್ ಲಾದಿಂದ ಮೂರು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಉಚಿತ
Prasthutha|