ಪಂಜಾಬ್ ನಲ್ಲಿ ಮತ್ತೆ ಗುಂಪುಹತ್ಯೆ: ‘ ನಿಶಾನ್ ಸಾಹಿಬ್ ’ ಗೆ ಅಗೌರವ ಆರೋಪದಲ್ಲಿ ವ್ಯಕ್ತಿಯ ಕೊಲೆ

Prasthutha: December 19, 2021

ಚಂಡೀಗಢ: ಪಂಜಾಬ್ ನ ಗುರುದ್ವಾರದ ನಿಶಾನ್ ಸಾಹಿಬ್ ( ಸಿಖ್ ಧಾರ್ಮಿಕ ಧ್ವಜ) ಗೆ ಅಗೌರವ ತೋರಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ನಡೆಸಲಾಗಿದೆ.

ಅಮೃತಸರದ ಸುವರ್ಣ ಮಂದಿರವನ್ನು ಅಪವಿತ್ರ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಗುಂಪು ಹತ್ಯೆ ನಡೆಸಿದ ಕೆಲವೇ ಗಂಟೆಗಳ ಒಳಗೆ ಇಂದು ಗುರುದ್ವಾರವೊಂದರಲ್ಲಿ ನಿಶಾನ್ ಸಾಹಿಬ್ ಗೆ ಅಗೌರವ ತೋರಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ನಡೆಸಲಾಗಿದೆ.

ವ್ಯಕ್ತಿಯೊಬ್ಬ ನಿಶಾನ್ ಸಾಹಿಬ್ ಅಗೌರವ ತೋರ್ಪಡಿಸಿ ಓಡಿ ಹೋಗಲು ಯತ್ನಿಸಿದ ಹಿನ್ನೆಲೆಯಲ್ಲಿ ಬೆನ್ನಟ್ಟಿದ ನಿಝಾಂಪುರ ಗ್ರಾಮದ ನಿವಾಸಿಗಳು ಹಲ್ಲೆ ನಡೆಸಿದ್ದರು.

ಈ ನಡುವೆ ಸ್ಥಳೀಯರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!