ಮುಂದೊಂದು ದಿನ ಕೇಜ್ರಿವಾಲ್ ಪ್ರಧಾನಿಯಾಗ್ತಾರೆ: ರಾಘವ್ ಚಡ್ಡಾ

Prasthutha|

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ “ಆಮ್ ಆದ್ಮಿ ಪಕ್ಷ” ಭರ್ಜರಿ ಜಯಭೇರಿಯತ್ತ ಮುನ್ನುಗ್ಗುತ್ತಿದ್ದು, ಆಮ್ ಆದ್ಮಿ ಪಕ್ಷ ಈಗ ರಾಷ್ಟ್ರೀಯ ಪಕ್ಷವಾಗಿದೆ. ಮುಂದೊಂದು ದಿನ ಅರವಿಂದ ಕೇಜ್ರಿವಾಲ್ ಪ್ರಧಾನಿಯಾಗುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಶೀಘ್ರವಾಗಿ ಕಾಂಗ್ರೆಸ್ ಬದಲು ಆಮ್ ಆದ್ಮಿ ಪಕ್ಷ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಲಿದೆ. ಒಂದು ಪಕ್ಷವಾಗಿ ಆಮ್ ಆದ್ಮಿ ಪಕ್ಷಕ್ಕೆ ಇದೊಂದು ಅದ್ಭುತ ದಿನವಾಗಿದೆ. ಯಾಕೆಂದರೆ ಇಂದು ನಾವು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದೇವೆ. ನಾವು ಇನ್ನು ಹೆಚ್ಚು ಕಾಲ ಪ್ರಾದೇಶಿಕ ಪಕ್ಷವಾಗಿರಲ್ಲ. ಜನರ ಆಶೀರ್ವಾದ ಹೀಗೆ ಮುಂದುವರಿದಲ್ಲಿ ಮುಂದೊಂದು ದಿನ ಅರವಿಂದ ಕೇಜ್ರಿವಾಲ್ ಅವರು ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಚಡ್ಡಾ ಭವಿಷ್ಯ ನುಡಿದಿದ್ದಾರೆ.



Join Whatsapp